ನವದೆಹಲಿ: ಇತ್ತೀಚೆಗೆ ಹೈದರಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಸಮಾನತೆಯ ಪ್ರತಿಮೆಯನ್ನು ಚೀನಾದಲ್ಲಿ ನಿರ್ಮಿಸಲಾಗಿದ್ದು, ಇದು ಆತ್ಮನಿರ್ಭರವೋ ಅಥವಾ ಚೀನಾ ನಿರ್ಭರವೋ ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಹೈಕೋರ್ಟ್ ನಲ್ಲಿ ಹಿಜಾಬ್ ವಿವಾದ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ
“ಸಮಾನತೆಯ ಪ್ರತಿಮೆಯನ್ನು ಚೀನಾದಲ್ಲಿ ತಯಾರಿಸಲಾಗಿತ್ತು. ನವಭಾರತ ಈಗ ನ ಚೀನಾ ನಿರ್ಭರ ಆಗಿದೆ ಎಂದು ಗಾಂಧಿ ಟೀಕಿಸಿದ್ದಾರೆ.
ಪ್ರಾಜೆಕ್ಟ್ ವೆಬ್ ಸೈಟ್ ವರದಿ ಪ್ರಕಾರ, ಹೈದರಾಬಾದ್ ನಲ್ಲಿ ಇತ್ತೇಚೆಗೆ 216 ಅಡಿ ಎತ್ತರ ಬೃಹತ್ ರಾಮಾನುಚಾರ್ಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. 2015ರಲ್ಲಿ 135 ಕೋಟಿ ರೂಪಾಯಿ ವೆಚ್ಚದ ಪ್ರತಿಮೆ ನಿರ್ಮಾಣದ ಗುತ್ತಿಗೆಯನ್ನು ಚೀನಾದ ಏರೋಸಸ್ ಕಾರ್ಪೋರೇಷನ್ ಗೆ ನೀಡಲಾಗಿತ್ತು.
ಹೈದರಾಬಾದ್ ನ ಹೊರವಲಯದ 45 ಎಕರೆ ಪ್ರದೇಶದಲ್ಲಿ ರಾಮಾನುಜಾಚಾರ್ಯ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಒಂದು ಸಾವಿರ ಕೋಟಿ ರೂಪಾಯಿ ಈ ಯೋಜನೆಗಾಗಿ ಜಾಗತಿಕವಾಗಿ ಭಕ್ತರಿಂದಲೇ ದೇಣಿಗೆಯನ್ನು ಸಂಗ್ರಹಿಸಲಾಗಿದೆ ಎಂದು ವರದಿ ತಿಳಿಸಿದೆ.