Advertisement

Lok Sabha Election: ರಾಯ್‌ ಬರೇಲಿಯಲ್ಲಿ ಅಮ್ಮನನ್ನೇ ಮೀರಿಸಿದ ರಾಹುಲ್‌!

09:17 PM Jun 04, 2024 | Team Udayavani |

ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 3,90,030 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ದಾಖಲೆ ಮುರಿದಿದ್ದಾರೆ. 2019ರಲ್ಲಿ ಸೋನಿಯಾ ಗಾಂಧಿ ಅವರು 1,67,178 ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯ ದಿನೇಶ್‌ ಪ್ರತಾಪ್‌ ಸಿಂಗ್‌ ತಾಯಿ ಹಾಗೂ ಮಗ ಇಬ್ಬರ ವಿರುದ್ಧವೂ ಸೋಲು ಅನುಭವಿಸಿದ್ದಾರೆ.

Advertisement

ಬಿಜೆಪಿ ಪಾಲಿಗೆ ನಿಜವಾಯ್ತು ಸಿಧು 295 ಹಾಡು!
“ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ 295 ಹಾಡಿನಂತೆ ಈ ಬಾರಿ ಇಂಡಿಯಾ ಒಕ್ಕೂಟ ಕೂಡ 295 ಕ್ಷೇತ್ರಗಳಲ್ಲಿ ಜಯ ಸಾಧಿಸುತ್ತದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದರು. ಆದರೆ, ರಾಹುಲ್‌ ನುಡಿದ ಈ ಭವಿಷ್ಯ ಬಿಜೆಪಿ ಪಾಲಿಗೆ ನಿಜವಾಗಿದೆ. ಅಬ್‌ ಕೀ ಬಾರ್‌ 400 ಪಾರ್‌ ಎನ್ನುವ ಎನ್‌ಡಿಎ ಘೋಷವಾಕ್ಯ ನೆಲಕಚ್ಚಿದೆ. ಬಿಜೆಪಿ ಒಂದೇ 303ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಎನ್‌ಡಿಎ 400 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಪಿಎಂ ಮೋದಿ ಸೇರಿದಂತೆ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತ ಪಡಿಸಿದ್ದರು. ಆದರೆ, ಎನ್‌ಡಿಎ 300ರ ಗಡಿಯನ್ನೇ ದಾಟಲಾಗಿಲ್ಲ. ಇತ್ತ ಇಂಡಿಯಾ ಒಕ್ಕೂಟ 230ರ ಆಸುಪಾಸಿನಲ್ಲಿದೆ.

ಇದನ್ನೂ ಓದಿ: Pushpendra Saroj: ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅತಿ ಕಿರಿಯ ಸಂಸದ ಪುಷ್ಪೇಂದ್ರ ಸರೋಜ್‌

Advertisement

Udayavani is now on Telegram. Click here to join our channel and stay updated with the latest news.

Next