Advertisement

ರಾಹುಲ್‌, ಸ್ಮತಿ ವಾಗ್ಧಾಳಿ

01:00 AM Mar 05, 2019 | Harsha Rao |

ಹೊಸದಿಲ್ಲಿ: ಉತ್ತರ ಪ್ರದೇಶದ ಅಮೇಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಆರ್ಡಿನನ್ಸ್‌ ಫ್ಯಾಕ್ಟರಿಯ ವಿಚಾರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರ ಸಚಿವೆ ಸ್ಮತಿ ಇರಾನಿ ಪರಸ್ಪರ ವಾಗ್ಧಾಳಿ ನಡೆಸಿದ್ದಾರೆ.

Advertisement

ನಾನು ಈ ಫ್ಯಾಕ್ಟರಿಗೆ 2010ರಲ್ಲೇ ಶಂಕುಸ್ಥಾಪನೆ ನೆರವೇರಿಸಿದ್ದೆ. ಹಲವು ವರ್ಷಗಳಿಂದ ಇಲ್ಲಿ ಸಣ್ಣ ಶಸ್ತ್ರಾಸ್ತ್ರಗಳು ತಯಾರಾಗುತ್ತಲೇ ಇವೆ. ರವಿವಾರ ನೀವು ಅಮೇಠಿಗೆ ಹೋಗಿ ಉದ್ಘಾಟನೆ ಮಾಡಿ ಸುಳ್ಳು ಹೇಳಿದ್ದೀರಿ ಎಂದು ರಾಹುಲ್‌ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ಮತಿ ಇರಾನಿ, ಅಮೇಠಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆ ಯುತ್ತಿರುವುದರಿಂದ ನೀವು ಹೆದರಿದ್ದೀರಿ. ಕೊರ್ವಾದಲ್ಲಿ ಪ್ರಧಾನಿ ಉದ್ಘಾಟನೆ ಮಾಡಿರು ವುದು ಭಾರತ ಮತ್ತು ರಷ್ಯಾದ ಜಂಟಿ ಸಹಭಾಗಿತ್ವದ ಫ್ಯಾಕ್ಟರಿ. ಇಲ್ಲಿ ಎಕೆ 203 ರೈಫ‌ಲ್‌ಗ‌ಳನ್ನು ತಯಾರಿಸಲಾಗುತ್ತದೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next