ಕಾಸರಗೋಡು: ಪೆರಿಯಾ ಕಲೊÂàಟ್‌ನಲ್ಲಿ ಹತ್ಯೆಗೀಡಾದ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್‌ಲಾಲ್ ಅವರ ಮನೆಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಸಂತೈಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಕೃಪೇಶ್ ಮತ್ತು ಶರತ್‌ಲಾಲ್ ಅವರ ಕುಟುಂಬಗಳಿಗೆ ನ್ಯಾಯ ಲಭಿಸಬೇಕೆಂದು ಹೇಳಿದರು.
ಕಲೊÂàಟ್‌ನ ಕೃಪೇಶ್ ಅವರ ಮನೆಯನ್ನು ಸಂದರ್ಶಿಸಿ ಸುಮಾರು 10 ನಿಮಿಷಗಳ ಕಾಲ ಅಲ್ಲಿ ಕಳೆದು ಬಳಿಕ ಶರತ್‌ಲಾಲ್ ಅವರ ಮನೆಗೆ ತೆರಳಿದರು. ಕೃಪೇಶ್ ಅವರ ಮನೆಯಿಂದ ಹೊರಬಂದ ಬಳಿಕ ಅವರ ಕುಟುಂಬಕ್ಕೆ ಶಾಸಕ ಹೈಬಿ ಈಡನ್ ನಿರ್ಮಿಸಿಕೊಡುತ್ತಿರುವ ಮನೆಗೆ ತೆರಳಿ ವೀಕ್ಷಿಸಿದರು.
ಗುರುವಾರ ಮಧ್ಯಾಹ್ನ ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪಿದ ರಾಹುಲ್ ಗಾಂಧಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯ ಬಳಿಯ ಹೆಲಿಪ್ಯಾಡ್‌ನಲ್ಲಿ ಬಂದಿಳಿದರು. ಅನಂತರ ಕಾರು ಮೂಲಕ ಪೆರಿಯ ಕಲೊÂàಟ್‌ಗೆ ಆಗಮಿಸಿದರು.
ಕೃಪೇಶ್ ಮತ್ತು ಶರತ್‌ಲಾಲ್ ಅವರ ಮನೆಗೆ ಭೇಟಿ ನೀಡಿ ಕುಟುಂಬಗಳೊಂದಿಗೆ ಮಾತನಾಡಿದ ಬಳಿಕ ಪೆರಿಯದಿಂದ ಹೆಲಿಕಾಪ್ಟರ್‌ನಲ್ಲಿ ಮರಳಿದರು. ಎಸ್‌ಪಿಜಿ ತಂಡ ಬಿಗು ಬಂದೋಬಸ್ತ್ ಏರ್ಪಡಿಸಿತ್ತು. ರಾಹುಲ್ ಗಾಂಧಿಯವರ ವಾಹನ ಹಾದುಹೋಗುವ ರಸ್ತೆ, ಶರತ್‌ಲಾಲ್, ಕೃಪೇಶ್ ಅವರ ಮನೆ ಪರಿಸರ ಪ್ರದೇಶಗಳು ಪೂರ್ಣ ಎಸ್‌ಪಿಜಿ ತಂಡ ನಿಗಾದಲ್ಲಿದ್ದವು.
ಚಟ್ಟಂಚಾಲ್‌ನಿಂದ ಪೆರಿಯ ಚಾಲಿಂಗಾಲ್ ವರೆಗಿನ ರಾ. ಹೆದ್ದಾರಿ, ಪಳ್ಳಿಕೆರೆ-ಆಲಕ್ಕೋಡ್ ರಸ್ತೆ, ಪೆರಿಯ ಕಲೊÂàಟ್‌ನಲ್ಲಿ ವಾಹನ ಸಂಚಾರ ನಿಯಂತ್ರಿಸಲಾಗಿತ್ತು.