ಹೈದರಾಬಾದ್ : ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಗೆದ್ದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Advertisement
ಪ್ರಸ್ತುತ ತೆಲಂಗಾಣದಲ್ಲಿರುವ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ವೇಳೆ ಟೀಂ ಇಂಡಿಯಾದ ನೀಲಿ ಬಣ್ಣದ ಜೆರ್ಸಿ ಧರಿಸಿದ್ದ ಬಾಲಕನೊಬ್ಬ ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡಿದ್ದ. ಆತನೊಂದಿಗೆ ಕೆಲ ನಿಮಿಷಗಳ ಕಾಲ ಆಟವಾಡಿ, ಆತನ ಬ್ಯಾಟ್ ಮೇಲೆ ಆಟೋಗ್ರಾಫ್ ನೀಡಿದರು.
ಹುಡುಗ ಭಾರತದ ದೊಡ್ಡ ಗೆಲುವನ್ನು ಆಚರಿಸುತ್ತಿದ್ದನು ನಂತರ ತನ್ನ ಕ್ರಿಕೆಟ್ ಬ್ಯಾಟ್‌ಗೆ ರಾಹುಲ್ ಗಾಂಧಿಯಿಂದ ಸಹಿ ಪಡೆದಿದ್ದುದಕ್ಕಾಗಿ ಸಂಭ್ರಮಿಸಿದನು.