Advertisement
ಆರಂಭ… 1991ರಲ್ಲಿ ರಾಜೀವ್ ಗಾಂಧಿ ಹತ್ಯೆಗೀಡಾದ ನಂತರ ಪಕ್ಷದ ನೇತೃತ್ವ ವಹಿಸಲು ಸೋನಿಯಾ ನಿರಾಕರಿಸಿದ್ದರು. ಆದರೆ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದ ಸೋನಿಯಾ, 1997ರಲ್ಲಿ ಪಕ್ಷದ ಪ್ರಾಥಮಿಕ ಸದಸ್ಯರಾದರು. ನಂತರ ಕೆಲವೇ ತಿಂಗಳುಗಳ ಬಳಿಕ 1998 ಮಾ.14 ರಂದು ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷೆ ಹುದ್ದೆಗೇರಿದರು. ಆದರೆ ಸೋನಿ ಯಾರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದರ ವಿರುದ್ಧ ಶರದ್ ಪವಾರ್, ಪಿ.ಎ.ಸಂಗ್ಮಾ, ತಾರಿಕ್ ಅನ್ವರ್ ಪ್ರತಿಭಟಿಸಿದ್ದರಿಂದ 1999 ಮೇ 15ರಂದು ರಾಜೀನಾಮೆ ನೀಡಿದರು. ನಂತರ ನಡೆದಿದ್ದೊಂದು ಬೃಹತ್ ಅಧ್ಯಾಯ.
Related Articles
Advertisement
2009ರಲ್ಲಿ ಮತ್ತೆ ಅಧಿಕಾರ: 206 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಸತತ 2ನೇ ಬಾರಿಗೆ ಪಕ್ಷ ಅಧಿಕಾರಕ್ಕೇರಿತು. ಒಂದು ಸಂದರ್ಭ ದಲ್ಲಂತೂ ಕಾಂಗ್ರೆಸ್ 15 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರೆ, ಹಗರಣಗಳ ಸರಣಿ ಪಕ್ಷವನ್ನು 2014ರ ಲೋಕಸಭೆ ಚುನಾವಣೆ ಯಲ್ಲಿ ಹೀನಾಯವಾಗಿ ಸೋಲಿಸಿತು.
ವಿವಾದಸೋನಿಯಾ ಗಾಂಧಿ ಅಧಿಕಾರಕ್ಕೆ ಆಗಮಿಸಿದಾಗ ಇದ್ದುದಕ್ಕಿಂತಲೂ ಹೀನಾಯ ಸ್ಥಿತಿಗೆ ಕಾಂಗ್ರೆಸ್ ಈಗ ತಲುಪಿರುವುದು ಸೋನಿಯಾ ಗಾಂಧಿಯ ಒಟ್ಟು ಅಧಿಕಾರಾವಧಿಯ ಮೇಲಿರುವ ಕಪ್ಪುಚುಕ್ಕೆ. ಆದರೆ ಕಳೆದ ಐದು ವರ್ಷಗಳಲ್ಲೇ ರಾಹುಲ್‌ಗೆ ಬಹುತೇಕ ಅಧಿಕಾರಗಳನ್ನು ಹಂತಹಂತವಾಗಿ ಸೋನಿಯಾ ಬಿಟ್ಟುಕೊಟ್ಟಿ ದ್ದರು. ಇನ್ನೊಂದೆಡೆ 2015ರಲ್ಲೇ ನಡೆಯಬೇಕಿದ್ದ ಕಾಂಗ್ರೆಸ್ ಆಡಳಿತಾತ್ಮಕ ಚುನಾವಣೆಯನ್ನು ಮುಂದೂಡಿದ್ದು ಕೂಡ ಪಕ್ಷದಲ್ಲಿ ಟೀಕೆಗೆ ಗುರಿಯಾಗಿತ್ತು. ಮುಂದಿರುವ ಸವಾಲುಗಳು
ಸಂಘಟನಾ ತಂಡ ಕಟ್ಟುವಿಕೆ: ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಲ್ಲಿ ಇದು ಕಷ್ಟ ಸಾಧ್ಯ. ಇದಕ್ಕೆ ಕಾರಣ ಇಂದು ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗಿಂತ ನಾಯಕರ ಸಂಖ್ಯೆಯೇ ಹೆಚ್ಚಾಗಿದೆ. ಪಕ್ಷದಲ್ಲಿರುವ ಹಿರಿಯರ ಕಡೆಗಣನೆ ಕೂಡ ಕಷ್ಟ. ನಾಯಕರ ಸೃಷ್ಟಿ: 2019ರ ಲೋಕಸಭೆ ಚುನಾವಣೆಗಾಗಿ ರಾಜ್ಯಮಟ್ಟದಲ್ಲಿ ತಳಮಟ್ಟದಿಂದ ಕಾರ್ಯಕರ್ತರನ್ನು ಪ್ರೇರೇಪಿಸುವಂಥ ನಾಯಕರ ಸೃಷ್ಟಿ. ಇದಕ್ಕಾಗಿ ಆಂತರಿಕವಾಗಿ ಇರುವ ಹೋರಾಟಗಳಿಗೆ ತಡೆ ಹಾಕಬೇಕು: ಆದರೆ ಈ ಪರಿಸ್ಥಿತಿಯಲ್ಲಿ ಇದು ತೀರಾ ದೊಡ್ಡ ಮಟ್ಟದ ಸವಾಲು. ಏಕೆಂದರೆ, 2019ರ ಚುನಾವಣೆಗೆ ಸಿದ್ಧವಾಗಲು ಇರುವ ಸಮಯ ತುಂಬಾ ಕಡಿಮೆ. ಅಂದರೆ ಇನ್ನು 18 ತಿಂಗಳಲ್ಲಿ ಈ ಕೆಲಸ ಮಾಡಬೇಕು. 2018ರ ವಿಧಾನಸಭೆ ಚುನಾವಣೆಗಳು: ಮುಂದಿನ ವರ್ಷ ಮಹತ್ವದ ರಾಜ್ಯಗಳು ಎನಿಸಿಕೊಂಡಿರುವ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕ ಹೊರತುಪಡಿಸಿ ಉಳಿದ ಮೂರರಲ್ಲೂ ಬಿಜೆಪಿಯದ್ದೇ ಆಳ್ವಿಕೆ. ಈ ರಾಜ್ಯಗಳಲ್ಲಿ ಸದರಿ ಮುಖ್ಯಮಂತ್ರಿಗಳ ಪ್ರತಿಯಾಗಿ ನಾಯಕತ್ವ ರೂಪಿಸಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಒಳಜಗಳಗಳನ್ನು ಹತ್ತಿಕ್ಕಿ ಮುನ್ನಡೆಯಬೇಕಿದೆ. ನರೇಂದ್ರ ಮೋದಿಗೆ ಪರ್ಯಾಯ: ಪಕ್ಷದೊಳಗಿನ ಇತರೆ ನಾಯಕರ ಅವಲಂಬನೆ ಬಿಟ್ಟು ಸ್ವಂತ ವರ್ಚಸ್ಸಿನಿಂದಲೇ ಬಲಾಡ್ಯ ನಾಯಕನಾಗಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಮೂಲಕವೇ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯ ಶಕ್ತಿ ಎಂತಾಗಬೇಕು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಪ್ರಭಾವ ಹೆಚ್ಚುತ್ತಿದ್ದರೂ, ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಇನ್ನಷ್ಟು ಮಾಗಬೇಕು. ನುಡಿಗೆ ತಕ್ಕಂತೆ ನಡೆ: ಹಲವಾರು ಸಂದರ್ಭಗಳಲ್ಲಿ ಇವರು ರೈತರು, ಶ್ರಮಿಕರು, ಮೀನುಗಾರರು… ಹೀಗೆ ಹಲವಾರು ವಿಭಾಗಗಳ ಜನರ ನೋವಿಗೆ ಸ್ಪಂದಿಸಿದ್ದಾರೆ. ಆದರೆ ತಮಗೆ ರಾಜಕೀಯವಾಗಿ ಇಂಥದ್ದೇ ಒಂದು ದೃಷ್ಟಿಕೋನ ಅಥವಾ ಸಿದ್ಧಾಂತವಿದೆ ಎಂಬುದನ್ನು ತೋರಿಸುವಲ್ಲಿ ಇಂದಿಗೂ ವಿಫಲರಾಗಿದ್ದಾರೆ. ಇತರ ಪಕ್ಷಗಳ ನಾಯಕರ ಜತೆಗಿನ ಸಂಬಂಧ: 2019ರಲ್ಲಿ ಬಿಜೆಪಿಗೆ ಪ್ರತಿಯಾಗಿ ಇತರ ಪಕ್ಷಗಳೊಂದಿಗೆ ಸೇರಿ ಹೇಗೆ ಸರಕಾರ ರಚಿಸಬಹುದು ಎಂಬ ದೂರದೃಷ್ಟಿ ಇರಬೇಕು. ಆದರೆ ಈಗಾಗಲೇ ಮಹಾಘಟಬಂಧನ್‌ನಲ್ಲಿದ್ದ ನಿತೀಶ್‌ಕುಮಾರ್ ಬಿಟ್ಟಾಗಿದೆ. ಮಮತಾ ಬ್ಯಾನರ್ಜಿಗೆ ತನ್ನದೇ ಆದ ಪ್ರಧಾನಿ ಹುದ್ದೆಯ ಆಕಾಂಕ್ಷೆಗಳಿವೆ. ಎಲ್ಲರನ್ನೂ ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು ಎಂಬುದೂ ರಾಹುಲ್ ಮುಂದಿರುವ ಸವಾಲು.