Advertisement

ಬೈಕ್ ಸವಾರಿ ಮಾಡಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡ ರಾಹುಲ್ ಗಾಂಧಿ

04:58 PM Oct 31, 2021 | Team Udayavani |

ಪಣಜಿ: ಜೀವನದಲ್ಲಿ ಇಂತಹ ಒಂದು ಕ್ಷಣ ಬರುತ್ತದೆ ಎಂದು ನಾನು ಕಲ್ಪನೆ ಕೂಡ ಮಾಡಿರಲಿಲ್ಲ ಎಂದು ಬಾಡಿಗೆ ಬೈಕ್ ಓಡಿಸುವ ಪ್ರಶಾಂತ ನಾಯ್ಕ ಸಂತಸದ ಮಾತುಗಳನ್ನಾಡಿದರು.

Advertisement

ಕಳೆದ ಸುಮಾರು 25 ವರ್ಷಗಳಿಂದ ಪಣಜಿಯಲ್ಲಿ ಬಾಡಿಗೆ ಬೈಕ್ ಓಡಿಸುವ ಪ್ರಶಾಂತ ನಾಯ್ಕ ಇವರಿಗೆ ಇಂದು ಬೈಕ್‍ನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರನ್ನು ಕೂಡಿಸಿಕೊಂಡು ಹೋಗುವ ಅವಕಾಶ ಸಿಕ್ಕಿತು. ತನ್ನ ಜೀವನದಲ್ಲಿಯೇ ಇದು “ಬೆಸ್ಟ್ ಸವಾರಿ” ಎಂದು ಪ್ರಶಾಂತ ನಾಯ್ಕ ಸಂತಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಶನಿವಾರದಿಂದ ಗೋವಾದಲ್ಲಿ ವಿವಿದೆಡೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಭಾನುವಾರ ಬಾಂಬೋಲಿಂನಿಂದ ಪಣಜಿಗೆ ಬೈಕ್ ಸವಾರಿ ಮಾಡುವ ಇಚ್ಛೆಯನ್ನು ರಾಹುಲ್ ಗಾಂಧಿ ವ್ಯಕ್ತಪಡಿಸಿದರು. ಇದಕ್ಕಾಗಿ ಕಾಂಗ್ರೆಸ್ ಬಾಡಿಗೆ ಬೈಕ್ ಚಾಲಕ ಪ್ರಶಾಂತ ನಾಯ್ಕ ರವರನ್ನು ಆಯ್ಕೆ ಮಾಡಲಾಯಿತು. ರಾಹುಲ್ ಗಾಂಧಿಯವರು ತನ್ನ ಬೈಕ್ ಮೇಲೆ ಕುಳಿತುಕೊಂಡು ಪ್ರಯಾಣ ಮಾಡಲಿದ್ದಾರೆ ಎಂದು ಅವರು ಎಂದೂ ಊಹಿಸಿರಲಿಲ್ಲ.

ರಾಹುಲ್ ಗಾಂಧಿಯವರು ತನ್ನ ಬೈಕ್ ಮೇಲೆ ಸವಾರಿ ಮಾಡಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದು, ಇದು ಒಂದು ನನ್ನ ಜೀವನದಲ್ಲಿ ಉತ್ತಮ ಕ್ಷಣ ಎಂದೇ ಪ್ರಶಾಂತ ನಾಯ್ಕ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next