ಹೊಸದಿಲ್ಲಿ: ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತನ್ನ ಬಾಳ ಸಂಗಾತಿಯ ಬಗ್ಗೆ ಮಾತನಾಡಿದ್ದಾರೆ. ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಇಬ್ಬರ ಗುಣಗಳ ಮಿಶ್ರಣವನ್ನು ಹೊಂದಿರುವ ಸಂಗಾತಿಯೊಂದಿಗೆ ಜೀವನದಲ್ಲಿ ನೆಲೆಸಲು ನಾನು ಬಯಸುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.
‘ಭಾರತ್ ಜೋಡೋ ಯಾತ್ರೆ’ ಸಂದರ್ಭದಲ್ಲಿ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು “ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ” ಎಂದು ಕರೆದರು.
ಅವರಂತಹ ಮಹಿಳೆಯೊಂದಿಗೆ ನೀವು ಸೆಟಲ್ ಆಗಲು ಬಯಸುತ್ತೀರಾ ಎಂದು ಕೇಳಿದಾಗ, “ಇದೊಂದು ಆಸಕ್ತಿದಾಯಕ ಪ್ರಶ್ನೆ. ನಾನು ಮಹಿಳೆಗೆ ಆದ್ಯತೆ ನೀಡುತ್ತೇನೆ. ನನ್ನ ತಾಯಿ ಮತ್ತು ಅಜ್ಜಿಯ ಗುಣಗಳ ಮಿಶ್ರಣದ ಗುಣ ಹೊಂದಿರುವ ಹುಡುಗಿ ಒಳ್ಳೆಯದು” ಎಂದಿದ್ದಾರೆ.
ಇದನ್ನೂ ಓದಿ:ಮತ್ತೆ ಡೌನ್: ತನ್ನಷ್ಟಕ್ಕೆ ಲಾಗೌಟ್ ಆಗುತ್ತಿದೆ ಟ್ವಿಟ್ಟರ್!
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುತ್ತಿರುವ ರಾಹುಲ್ ತನ್ನ ಮೋಟರ್ ಸೈಕಲ್ ಮತ್ತು ಸೈಕಲ್‌ಗಳನ್ನು ಓಡಿಸುವ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
“ನಾನು ಎಲೆಕ್ಟ್ರಿಕ್ ಸ್ಕೂಟರ್ ಓಡಿಸಿದ್ದೇನೆ, ಆದರೆ ಎಂದಿಗೂ ಎಲೆಕ್ಟ್ರಿಕ್ ಬೈಕ್ ಓಡಿಸಿಲ್ಲ. ನೀವು ಈ ಚೈನೀಸ್ ಕಂಪನಿಯನ್ನು ನೋಡಿದ್ದೀರಾ, ಎಲೆಕ್ಟ್ರಿಕ್ ಮೋಟಾರ್ ಗಳ ಸೈಕಲ್‌ಗಳು ಮತ್ತು ಮೌಂಟೈನ್ ಬೈಕುಗಳಿವೆ. ಬಹಳ ಆಸಕ್ತಿದಾಯಕ ಪರಿಕಲ್ಪನೆ” ಎಂದು ಅವರು ಹೇಳಿದರು.