ನವದೆಹಲಿ : ರೋಹಿತ್ ವೇಮುಲ ಅವರನ್ನು “ಮೈ ಹೀರೋ” ಎಂದು ಬಣ್ಣಿಸಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಹೈದ್ರಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲು ಹಾಸ್ಟೇಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇದೀಗ ಆರು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ವೇಮುಲ ನನ್ನ ಹೀರೋ. ಅವರು ಪ್ರತಿರೋಧದ ಸಂಕೇತವಾಗಿ ಸದ ನೆನಪಿನಲ್ಲಿ ಉಳಿಯುತ್ತಾರೆ’’ ಎಂದು ಬಣ್ಣಿಸಿದ್ದಾರೆ.
ದಲಿತ ಐಡೆಂಟಿಟಿ, ಮೂಲ ನಿವಾಸಿತ್ವ ಹಾಗೂ ಭೇದ ಭಾವದ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ವೇಮುಲ ಸಾಯಿಸಲ್ಪಟ್ಟರು. ಎಷ್ಟೇ ವರ್ಷ ಕಳೆದರು ವೇಮುಲು ನಮ್ಮ ಸ್ಮರಣೆಯಲ್ಲಿ ಇರುತ್ತಾರೆ. ವೇಮುಲು ಅವರ ತಾಯಿ ಭರವಸೆಯ ಸಂಕೇತವಾಗಿದ್ದಾರೆ. ವೇಮುಲು ನನ್ನ ಹೀರೋ, ನನ್ನ ಸೋದರ ಎಂದು ರಾಹುಲ್ ಗಾಂಧಿ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ವೇಮುಲು ನಿಗೂಢ ಸಾವು ರಾಷ್ಟ್ರಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ವೇಮುಲ ಕೊಲೆಯಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಧ್ವನಿ ಎತ್ತಿದ್ದವು.