Advertisement
ಇಂಥ ಪರಿಸ್ಥಿತಿಯಲ್ಲಿ ರಾಹುಲ್ ಚೀನಾ ರಾಯಭಾರ ಕಚೇರಿಗೆ ತೆರಳಿದ್ದು ಏಕೆ ಎಂದು ಬಿಜೆಪಿ ಪ್ರಶ್ನಿಸಿದರೆ, ಕಳೆದ ವಾರವಷ್ಟೇ ನೀವು ಮೂವರು ಸಚಿವರನ್ನು ಚೀನಾಗೆ ಕಳುಹಿಸಿದ್ದು ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಸೋಮವಾರ ಬೆಳಗ್ಗೆ ಚೀನಾದ ರಾಯಭಾರಿ ಕಚೇರಿ ತನ್ನ ವೆಬ್‌ಸೈಟ್‌ನಲ್ಲಿ ರಾಹುಲ್ ಭೇಟಿ ಕುರಿತಂತೆ ಮಾಹಿತಿ ನೀಡಿತ್ತು. ಇದನ್ನು ಆಧರಿಸಿ ಕೆಲ ಆಂಗ್ಲ ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಆಗ ರಾಹುಲ್ ಭೇಟಿಯನ್ನು ಅಲ್ಲಗಳೆದಿದ್ದ ಪಕ್ಷದ ವಕ್ತಾರ ರಣದೀಪ್ ಸುಜೇìವಾಲ,ಇದು ಮೋದಿ ಭಕ್ತರಾಗಿರುವ ಕೆಲವು ಸುದ್ದಿ ವಾಹಿನಿಗಳು ಸೃಷ್ಟಿಸಿದ “ಕಟ್ಟು ಕಥೆ’ ಎಂದು ಹೇಳಿದ್ದರು. ಆದರೆ, ಇದಾದ ಕೆಲ ಹೊತ್ತಿನಲ್ಲೇ ಟ್ವೀಟ್ ಮೂಲಕ ಸ್ವತಃ ರಾಹುಲ್ ಗಾಂಧಿ ಅವರೇ ಭೇಟಿ ಮಾಡಿದ್ದು ಸತ್ಯ ಎಂದರು. ಜತೆಗೆ, ಸುಜೇìವಾಲ ಕೂಡ ರಾಹುಲ್ ಭೇಟಿಯನ್ನು ಟ್ವೀಟ್ ಮೂಲಕವೇ ಒಪ್ಪಿಕೊಂಡರು.
ಚೀನಾ ರಾಯಭಾರ ಕಚೇರಿ ಈ ಹೇಳಿಕೆಯನ್ನೇ “ಡಿಲೀಟ್” ಮಾಡಿತು! ಹೌದು, ಹೋಗಿದ್ದು ಸತ್ಯ: ರಾಹುಲ್ ಹೋಗಿಲ್ಲ, ಹೋಗಿದ್ದಾರೆ ಎಂಬ ಚರ್ಚೆಯ ನಡುವೆಯೇ ಸ್ವತಃ ರಾಹುಲ್ ಗಾಂಧಿ ಅವರೇ ಟ್ವಿಟರ್
ಮೂಲಕ ನಾನು ಹೋಗಿದ್ದು ಸತ್ಯ ಎಂದರು. ಗಡಿ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಮಾಹಿತಿ ಪಡೆದುಕೊಳ್ಳುವುದು ನನ್ನ ಕರ್ತವ್ಯ ಎಂದು ಹೇಳಿದರು. ಅಲ್ಲದೆ, ಸಿಕ್ಕಿಂ ಗಡಿ ವಿವಾದ ತೀವ್ರವಾಗಿರುವಾಗಲೇ ಮೂವರು ಸಚಿವರು ಚೀನಾ ಪ್ರವಾಸಕ್ಕೆ ತೆರಳಿದ್ದು ಏಕೆ ಎಂಬ ಬಗ್ಗೆಯೂ ಮಾಹಿತಿ ಬೇಕಿತ್ತು. ಮಾಜಿ ಭದ್ರತಾ ಸಲಹೆಗಾರ, ಕಾಂಗ್ರೆಸ್ ನಾಯಕರನ್ನೂ ಭೇಟಿ ಮಾಡಿ ಚರ್ಚಿಸಿದ್ದೇನೆ ಎಂದು ರಾಹುಲ್ ಹೇಳಿದರು. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು, ಜರ್ಮನಿಯ ಬರ್ಗ್‌ನಲ್ಲಿ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ್ದ ಬಗ್ಗೆಯೂ ಮಾಹಿತಿ ಪಡೆಯಲು ರಾಹುಲ್ ಹೋಗಿದ್ದರು ಎಂದು ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಬಿಜೆಪಿ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಹೋಗಿದ್ದು ನಿಜವೇ ಆಗಿದ್ದರೂ, ಚೀನಾ
ರಾಯಭಾರ ಕಚೇರಿ ತನ್ನ ವೆಬ್‌ಸೈಟ್‌ನಿಂದ ಈ ಮಾಹಿತಿ ಡಿಲೀಟ್ ಮಾಡಿದ್ದು ಏಕೆ ಎಂದು ಪ್ರಶ್ನಿಸಿದೆ.
Related Articles
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಚೀನಾದ ಅಧಿಕೃತ ಮಾಧ್ಯಮ ಸೋಮವಾರ ಭಾರತಕ್ಕೆ ಇನ್ನೊಂದು ಎಚ್ಚರಿಕೆ ನೀಡಿದೆ. ದಲಾಯ್ ಲಾಮಾ ಅವರನ್ನು ಮುಂದಿಟ್ಟುಕೊಂಡು ಚೀನಾವನ್ನು ಹೆಡೆಮುರಿ ಕಟ್ಟುವ ಕನಸಿನಿಂದ “ಟಿಬೆಟ್ ಕಾರ್ಡ್’ ಬಳಸಿದರೆ ಭಾರತ ತನ್ನನ್ನೇ ತಾನು ಸುಟ್ಟುಕೊಳ್ಳುವ ಪ್ರಕ್ರಿಯೆಗೆ ನಾಂದಿ ಹಾಡಿಕೊಳ್ಳಲಿದೆ ಎಂದು ಹೇಳಿದೆ. ಭಾರತೀಯ ಮಾಧ್ಯಮಗಳ ವರದಿ
ಪ್ರಸ್ತಾಪಿಸಿ, ಲಡಾಕ್‌ನಲ್ಲಿ ಟಿಬೆಟ್ ಧ್ವಜ ಹಾರಿಸಿ ಚೀನಾಕ್ಕೆ ಬೆದರಿಸಬಹುದೆನ್ನುವುದು ಭಾರತದ ತಂತ್ರವಾಗಿದ್ದರೆ ಅದರ ಫಲಿತಾಂಶವೇ ಬೇರೆ ಆಗಲಿದೆ ಎಂದು ವರದಿ ಮಾಡಿದೆ.
Advertisement
ಮಾತುಕತೆ ನಡೆದಿಲ್ಲಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯುತ್ತಿ ರುವ ಜಿ20 ಶೃಂಗದಲ್ಲಿ ಭಾರತ-ಚೀನಾ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದೇ ಇಲ್ಲ ಎಂದು ಚೀನಾ ಇಂದು ಸ್ಪಷ್ಟನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿ ಮಾಡಿ ಬಂಗಾಳಕೊಲ್ಲಿ ಯಲ್ಲಿ ಅಮೆರಿಕ, ಜಪಾನ್ ಜತೆ ಜಂಟಿ ಸಮರಾಭ್ಯಾಸ ಮಾಡುತ್ತಿರುವ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿತ್ತು. ಇದೇ ವೇಳೆ ದ್ವಿಪಕ್ಷೀಯ ಮಾತುಕತೆಯೂ ನಡೆದಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚೀನಾ ಸ್ಪಷ್ಟನೆ ನೀಡಿದೆ. ರಾಹುಲ್ ಗಾಂಧಿ ಅವರು ಚೀನಾ, ಭೂತಾನ್ ರಾಯಭಾರಿ ಕಚೇರಿಗೆ ಭೇಟಿ ನೀಡಿರುವುದರಲ್ಲಿ ತಪ್ಪೇನಿದೆ? ಯಾಕೆ, ಅವರಿಗೆ ಗಡಿಯಲ್ಲಿನ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕಿಲ್ಲವೇ?
ರಮ್ಯಾ, ಮಾಜಿ ಸಂಸದೆ ರಾಯಭಾರಿ ಕಚೇರಿ ಅಧಿಕಾರಿಗಳ ಭೇಟಿ ಮಾಡಿರುವುದನ್ನು ಪ್ರಶ್ನಿಸುವ ಬಿಜೆಪಿ ನಾಯಕರು, ಮೊದಲು ಮೂವರು ಹಿರಿಯ ಸಚಿವರು ಚೀನಾ ಆತಿಥ್ಯದಲ್ಲಿ ಇರುವುದಕ್ಕೆ ಕಾರಣ ಪ್ರಕಟಿಸಲಿ.
ರಾಹುಲ್ ಗಾಂಧಿ ಎಐಸಿಸಿ ಉಪಾಧ್ಯಕ್ಷ