Advertisement

Rahul Gandhi ವಿಪಕ್ಷ ನಾಯಕ; ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ನಿರ್ಣಯ

12:11 AM Jun 09, 2024 | Team Udayavani |

ಹೊಸದಿಲ್ಲಿ: ಲೋಕಸಭೆಯಲ್ಲಿ ವಿಪಕ್ಷಗಳ ನಾಯಕನ ಜವಾಬ್ದಾರಿಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೇ ವಹಿಸಿಕೊಳ್ಳಬೇಕು ಎಂಬ ಅಭಿ ಪ್ರಾಯಗಳು ಕೇಳಿಬಂದ ನಡುವೆಯೇ ಶನಿವಾರ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯಲ್ಲೂ ಈ ಸಂಬಂಧ ಅವಿ ರೋಧ ನಿರ್ಣಯ ತೆಗೆದುಕೊಳ್ಳಲಾಗಿದೆ.

Advertisement

ವಿಪಕ್ಷ ನಾಯಕನಾಗುವುದಕ್ಕೆ ರಾಹುಲ್‌ ಒಪ್ಪಿಗೆ ಸೂಚಿಸುವುದು ಮಾತ್ರ ಬಾಕಿ ಉಳಿದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸಹಿತ ಹಲವು ನಾಯಕರು ಭಾಗಿಯಾಗಿದ್ದ ಸಭೆಯಲ್ಲಿ ಎರಡು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಭಾರತ್‌ ಜೋಡೋ ಮತ್ತು ಭಾರತ್‌ ಜೋಡೋ ನ್ಯಾಯ ಯಾತ್ರೆ ಎರಡೂ ರಾಷ್ಟ್ರ ರಾಜಕೀಯದಲ್ಲಿ ಮಹಾ ತಿರುವುಗಳನ್ನು ನೀಡಿವೆ. ಈ ಯಾತ್ರೆಗಳು ರಾಹುಲ್‌ ಗಾಂಧಿ ಅವರ ಸ್ವಂತ ಚಿಂತನೆ ಮತ್ತು ವ್ಯಕ್ತಿತ್ವವನ್ನು ಬಿಂಬಿಸುತ್ತವೆ ಎಂದು ಸಮಿತಿ ಪ್ರಶಂಸಿಸಿದೆ.

ರಾಹುಲ್‌ ಅವರ ಚುನಾವಣ ಪ್ರಚಾರ ಕಾರ್ಯತಂತ್ರವು ಇತರರಿಗಿಂತ ಮೊನಚಾಗಿದ್ದು, ಸಂವಿಧಾನ ಮತ್ತು ಪ್ರಜಾ ಪ್ರಭುತ್ವದ ರಕ್ಷಣೆ ವಿಚಾರವನ್ನು ಚರ್ಚೆಗೆ ತಂದವರೇ ಅವರು ಎಂದು ತಿಳಿಸಿದೆ. ರಾಹುಲ್‌ ವಿಪಕ್ಷ ನಾಯಕರಾಗಬೇಕು ಎಂಬ ಸದಸ್ಯರ ಆಗ್ರಹದ ಪ್ರಸ್ತಾವವನ್ನು ಸದಸ್ಯರ ಮುಂದಿಟ್ಟಿದ್ದು, ಸಮಿತಿಯ ಸರ್ವ ಸದಸ್ಯರೂ ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ.

ಬಳಿಕ ಐಎನ್‌ಡಿಐಎ ಒಕ್ಕೂಟದ ಎಲ್ಲ ಪಕ್ಷಗಳು ವಹಿಸಿದ ಪಾತ್ರಕ್ಕೆ ಸಿಡಬ್ಲ್ಯುಸಿಯಲ್ಲಿ ಧನ್ಯವಾದ ಅರ್ಪಿಸಲಾಗಿದ್ದು, ಶೀಘ್ರವೇ ಪ್ರತಿಯೊಂದು ಘಟಕಗಳ ಜತೆಗೆ ಪ್ರತ್ಯೇಕ ಚರ್ಚೆ ನಡೆಸಲು ನಿರ್ಣಯ ತೆಗೆದುಕೊಳ್ಳ ಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

Advertisement

ರಾಹುಲ್‌ ನಿರ್ಣಯ ಶೀಘ್ರ
ಸಿಡಬ್ಲ್ಯುಸಿ ನಿರ್ಣಯದ ಬಗ್ಗೆ ರಾಹುಲ್‌ ಗಾಂಧಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹೇಳಿದ್ದಾರೆ. ಸಮಿತಿಯ ಸದಸ್ಯರ ಭಾವನೆಗಳನ್ನು ಗೌರವಿಸಿ ಈ ಪ್ರಸ್ತಾವವನ್ನು ಅವರು ಒಪ್ಪಿಕೊಳ್ಳುತ್ತಾರೆಂಬ ನಿರೀಕ್ಷೆ ಇದೆ ಎಂದು ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

ಸೋನಿಯಾ ಕಾಂಗ್ರೆಸ್‌ ಸಿಪಿಸಿ ನಾಯಕಿ
ಹೊಸದಿಲ್ಲಿ: ಕಾಂಗ್ರೆಸ್‌ ಸಂಸದೀಯ ಮಂಡಳಿ (ಸಿಪಿಸಿ) ಅಧ್ಯಕ್ಷೆಯಾಗಿ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ಆಯ್ಕೆ ಯಾಗಿದ್ದಾರೆ. ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದು ಒಂದು ಭಾವನಾತ್ಮಕ ಕ್ಷಣ ಎಂದಿದ್ದಾರೆ. ಚುನಾವಣೆಯ ಫ‌ಲಿತಾಂಶ “ಪ್ರಧಾನಿ ಮೋದಿಯವರಿಗೆ ನೈತಿಕ ಮತ್ತು ರಾಜಕೀಯ ಸೋಲು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next