Advertisement

ಪಾರೀಕರ್‌ ಆರೋಗ್ಯ ವಿಚಾರಿಸಿದ ರಾಹುಲ್‌

12:50 AM Jan 30, 2019 | Team Udayavani |

ಪಣಜಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಂಗಳವಾರ ಗೋವಾದಲ್ಲಿ ಸಿಎಂ ಮನೋಹರ್‌ ಪಾರೀಕರ್‌ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ರಾಜ್ಯ ಅಸೆಂಬ್ಲಿ ಸಂಕೀರ್ಣಕ್ಕೆ ಭೇಟಿ ನೀಡಿ, ಸಿಎಂ ಕಾರ್ಯಾಲಯದಲ್ಲಿದ್ದ ಪರ್ರಿಕರ್‌ ಜತೆ 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ತದನಂತರ, ಕಾಂಗ್ರೆಸ್‌ ಶಾಸಕರ ಜತೆಗೂ ಕೆಲ ಕಾಲ ಸಮಾಲೋಚನೆ ನಡೆಸಿದ್ದಾರೆ. ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಗೋವಾ ಆಡಿಯೋ ಟೇಪ್‌ ವಿಚಾರವನ್ನೆತ್ತಿಕೊಂಡು ಸೋಮವಾರವಷ್ಟೇ ಬಿಜೆಪಿ ವಿರುದ್ಧ ರಾಹುಲ್‌ ಮತ್ತೂಮ್ಮೆ ವಾಗ್ಧಾಳಿ ನಡೆಸಿದ್ದರು. ಅದರ ಬೆನ್ನಲ್ಲೇ ಅವರು ಪರ್ರಿಕರ್‌ರನ್ನು ಭೇಟಿಯಾಗಿದ್ದಾರೆ.

Advertisement

ರಫೇಲ್‌ಗೆ ಸಂಬಂಧಿಸಿದ ಹೊಸ ಡೀಲ್‌ ಅನ್ನು ಪ್ರಧಾನಿ ಮೋದಿ ಅವರು ಅನಿಲ್‌ ಅಂಬಾನಿಗೆ ಅನುಕೂಲ ಕಲ್ಪಿಸಲೆಂದು ಮಾಡಿದ್ದಾರೆ. ಈ ಹೊಸ ಒಪ್ಪಂದಕ್ಕೂ, ತಮಗೂ ಸಂಬಂಧವಿಲ್ಲ ಎಂದು ಸ್ವತಃ ಪರ್ರಿಕರ್‌ ಅವರೇ ಸ್ಪಷ್ಟಪಡಿಸಿದ್ದಾರೆ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next