Advertisement
ಶಿಕ್ಷಣ ಸಂಸ್ಥೆಯೊಂದರಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಮಾಡುವುದರ ಮೂಲಕ ರಾಹುಲ್ ಗಾಂಧಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಆ ಕಾರಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪತ್ರದ ಮೂಲಕ ಆರೋಪಿಸಿ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಎಲ್. ಮುರುಗನ್, ಮುಖ್ಯ ಚುನಾವಣಾಧಿಕಾರಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
Related Articles
Advertisement
ಗಾಂಧಿ ವಿದ್ಯಾರ್ಥಿಗಳೊಂದಿಗೆ ನೀಟ್ (ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ) ನೀತಿ, ವಿವಾದಿತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಸಿದ್ದರು.
“ನಾನು ನಿಮ್ಮನ್ನು ಓದಲು ಒತ್ತಾಯಿಸಿದರೆ ಅದು ದುರಹಂಕಾರ, ಆದರೆ ನಿಮಗೆ ಏನು ಬೇಕು ಎಂದು ನಾನು ಕೇಳಿದರೆ ಅದು ನಮ್ರತೆ. ದುರಹಂಕಾರವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಆದರೆ ನಮ್ರತೆ ಸಮಸ್ಯೆಗಳನ್ನು ಪರಿಹರಿಸುತ್ತದೆ” ಎಂದು ಗಾಂಧಿ ವಿದ್ಯಾರ್ಥಿಗಳೊಂದಿಗೆ ಮಾಡಿದ ಸಂವಾದದಲ್ಲಿ ತಿಳಿಸಿದ್ದರು.
ಇತ್ತೀಚೆಗೆ, ಕಾಂಗ್ರೆಸ್ ನ ಮಾಜಿ ರಾಷ್ಟ್ರೀಯ ಅಧ್ಯಕ್ಷ, ವಯನಾಡ್ ಸಂಸದ ರಾಹುಲ್ ಗಾಂಧಿ ಮೀನುಗಾರರ ಜೊತೆ ಸಮುದ್ರಕ್ಕೆ ಜಿಗಿದಿದ್ದು, ಸೆಂಟ್ ಜೊಸೆಫ್ ಹೈಯರ್ ಸೆಕಂಡರಿ ಸ್ಕೂಲ್ ಮುಲಾಗುಮುದಬ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ ವೇಳೆ ವಿದ್ಯಾರ್ಥಿನಿಯರೊಂದಿಗೆ ಹಾಡೊಂದಕ್ಕೆ ಹೆಜ್ಜೆಹಾಕಿದ್ದು ಮತ್ತು ವಿದ್ಯಾರ್ಥಿಯೋರ್ವಳ ಸವಾಲಿಗೆ ರಾಹುಲ್ ಪುಷ್ ಅಪ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.