Advertisement

ತಪ್ಪು ಟ್ವೀಟ್‌ ಮಾಡಿ ಮತ್ತೆ ಟ್ರೋಲ್‌ ಆದ ರಾಹುಲ್‌ ಗಾಂಧಿ!

12:46 PM Sep 17, 2017 | |

ಹೊಸದಿಲ್ಲಿ: ಸದಾ ಒಂದಿಲ್ಲ ಒಂದು ತಪ್ಪು ಹೇಳಿಕೆ ನೀಡಿ ಪೇಚಿಗೆ ಸಿಲುಕುವುದಲ್ಲಿ ಹಾಸುಹೊಕ್ಕಾಗಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಮತ್ತೆ ಪೇಚಿಗೆ ಸಿಲುಕಿದ್ದಾರೆ. ಅವರ ಟ್ವೀಟನ್ನು  ನೆಟಿಜನ್‌ಗಳು ಮತ್ತೆ ಟ್ರೋಲ್‌ ಮಾಡಿದ್ದಾರೆ. 

Advertisement

ಐಎಎಫ್ ಮಾರ್ಷಲ್‌ ಅರ್ಜನ್‌ ಸಿಂಗ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿ ರಾಹುಲ್‌ ಟ್ವೀಟ್‌ ಮಾಡಿದ್ದು ಅದರಲ್ಲಿ ‘ಏರ್‌ ಮಾರ್ಷಲ್‌’ ಎಂದು ಬರೆದಿದ್ದಾರೆ. ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ‘ಯಾರು ಏನೆಂದು ತಿಳಿದು ಟ್ವೀಟ್‌ ಮಾಡಿ’ ಎಂದು ಹಲವರು ಬರೆದಿದ್ದಾರೆ.

ಟ್ವೀಟ್‌ನಲ್ಲಿ ”ಸೈನಿಕ ಮತ್ತು ರಾಜತಾಂತ್ರಿಕ ಶ್ರೇಷ್ಠ ತೆಯ, ವಾಯುಪಡೆಯ  ಏರ್‌ ಮಾರ್ಷಲ್‌ ಅರ್ಜನ್‌ ಸಿಂಗ್‌ ಅವರ ನಿಧನ ತುಂಬಲಾರದ ನಷ್ಟವಾಗಿದೆ. ಭಾರತ ನಿಜವಾದ ಹಿರೋವನ್ನು ಕಳೆದುಕೊಂಡಿದೆ. ತೀವ್ರ ಸಂತಾಪ ಎಂದು ಬರೆದಿದ್ದರು.

ಏರ್‌ ಮಾರ್ಷಲ್‌ 3 ಸ್ಟಾರ್‌ ಶ್ರೇಣಿಯದ್ದಾರೆ. ಮಾರ್ಷಲ್‌ 5 ಸ್ಟಾರ್‌ ಶ್ರೇಣಿಯ ಹುದ್ದೆಯಾಗಿದೆ. 

ರಾಹುಲ್‌ ವಾರದ  ಹಿಂದೆ ಅಮೆರಿಕದಲ್ಲಿ ಭಾರತದಲ್ಲಿ 546 ಸಂಸತ್‌ ಸ್ಥಾನಗಳಿಗೆ ಎಂದು ತೀವ್ರ ಟೀಕೆಗೆ ಒಳಗಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next