Advertisement
ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿರುವ ಕಾರಣ ನಿಯಮದಂತೆ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಆದೇಶಿಸಲಾಗಿದೆ. ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ.
Related Articles
Advertisement
ಜತೆಗೆ 2013ರ ಜು.10ರಂದು ಸುಪ್ರೀಂ ಕೂಡ ಇದೇ ಅಂಶವನ್ನು ಪುಷ್ಟೀಕರಿಸಿತ್ತು. ಜತೆಗೆ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 (4)ರ ಅನ್ವಯ ಅವರಿಗೆ ಆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ 3 ತಿಂಗಳ ಅವಕಾಶವನ್ನು ತೆಗೆದು ಹಾಕಿ ದೂರಗಾಮಿ ಪರಿಣಾಮ ಬೀರುವ ತೀರ್ಪು ನೀಡಿತ್ತು.
ಏನಿದು ಪ್ರಕರಣ? 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್, “ನೀರವ್ ಮೋದಿಯಾಗಿರಲಿ, ಲಲಿತ್ ಮೋದಿಯಾಗಿರಲಿ ಅಥವಾ ನರೇಂದ್ರ ಮೋದಿಯಾಗಿರಲಿ, ಎಲ್ಲ ಕಳ್ಳರ ಸರ್ ನೇಮ್ ಕೂಡ ಮೋದಿಯೇ ಆಗಿರುವುದೇಕೆ?’ ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಗುಜರಾತ್‌ನ ಮಾಜಿ ಸಚಿವ, ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಎಂಬವರು ರಾಹುಲ್ ವಿರುದ್ಧ ಮಾನಹಾನಿ ಕೇಸು ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಮುಂದೇನು? ಚುನಾವಣಾ ಆಯೋಗವು ವಯನಾಡ್‌ಗೆ ಹೊಸದಾಗಿ ಚುನಾವಣೆ ಘೋಷಣೆ ಮಾಡಬಹುದು. ಅಲ್ಲದೇ, ಈ ತೀರ್ಪನ್ನು ಉನ್ನತ ನ್ಯಾಯಾಲಯವು ವಜಾ ಮಾಡದಿದ್ದರೆ, ರಾಹುಲ್‌ಗೆ ಮುಂದಿನ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲೂ ಸಾಧ್ಯವಾಗುವುದಿಲ್ಲ.