ಭೋಪಾಲ್ : ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರು ಮಹಿಳಾ ನಾಯಕಿ – ಇಮಾರ್ತಿ ದೇವಿ ಅವರನ್ನು ‘ಐಟಂ’ ಎಂದು ಸಂಬೋಧಿಸಿದ ವಿವಾದಾತ್ಮಕ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು ಕಮಲ್ ನಾಥ್ ಅವರ ಹೇಳಿಕೆ ದುರದೃಷ್ಟಕರ ಎಂದು ಹೇಳಿಕೆ ನೀಡಿದ್ದಾರೆ, ಇದರ ಬೆನ್ನಲ್ಲೇ ಕಮಲ್ ನಾಥ್ ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳುವುದಿಲ್ಲ ಎಂದು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಭಾನುವಾರ ದಬ್ರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಹೊಗಳುವ ವೇಳೆ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿಯನ್ನು ಐಟಂ ಎಂದು ಗೇಲಿ ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧವು ವ್ಯಕ್ತವಾಗಿತ್ತು.
ಕಮಲ್ ನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ಕಮಲ್ ನಾಥ್ ನಮ್ಮದೇ ಪಕ್ಷದವರು ಆದರೆ ಅವರು ಈ ರೀತಿಯ ಹೇಳಿಕೆ ನೀಡಿರುವುದು ದುರದೃಷ್ಟಕರ, ಅವರು ಬಳಸಿದ ಪದ ಬಳಕೆಗೆ ನನ್ನ ಆಕ್ಷೇಪವಿದೆ ಅಲ್ಲದೆ ಇಂತಹ ಪದಗಳನ್ನು ಯಾರು ಬಳಸಿದರು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ :ಮಾವನ ಆಸ್ತಿ ಕಬಳಿಸಲು ಸಂಚು ಮಾಡಿದ್ದ ರಾಜಶೇಖರ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?
ಆದರೆ ರಾಹುಲ್ ಹೇಳಿಕೆಯ ಬೆನ್ನಲ್ಲೇ ಮಾತನಾಡಿದ ಕಾಂಗ್ರೆಸ್ ನಾಯಕ ಕಮಲ್ ನಾಥ್ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ, ಅಲ್ಲದೆ ನಾನು ಹೇಳಿಕೆ ನೀಡಿದ ಸಂದರ್ಭದ ಬಗ್ಗೆ ಈಗಾಗಲೇ ವಿವರಿಸಿದ್ದೇನೆ. ನನಗೆ ಯಾರನ್ನು ನಿಂದಿಸುವ ಉದ್ದೇಶ ಇಲ್ಲ ಹಾಗಾಗಿ ನಾನು ಕ್ಷಮೆ ಯಾಕೆ ಕೇಳಬೇಕು ಎಂದು ಪ್ರಶ್ನಿಸಿದ್ದಾರೆ.