Advertisement

ದ್ರೋಣಾಚಾರ್ಯಕ್ಕೆ ದ್ರಾವಿಡ್‌ ಹೆಸರು: ಬಿಸಿಸಿಐನಲ್ಲೇ ಅಪಸ್ವರ

06:45 AM Apr 30, 2018 | Team Udayavani |

ನವದೆಹಲಿ: ಭಾರತ 19 ವಯೋಮಿತಿ ಮತ್ತು ಎ ಕ್ರಿಕೆಟ್‌ ತಂಡಗಳ ತರಬೇತುದಾರ ರಾಹುಲ್‌ ದ್ರಾವಿಡ್‌ ಹೆಸರನ್ನು ಬಿಸಿಸಿಐ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಇದಕ್ಕೆ ಬಿಸಿಸಿಐನಲ್ಲೇ ಅಪಸ್ವರ ಕೇಳಿಬಂದಿದೆ. 

Advertisement

ದ್ರಾವಿಡ್‌ ಅಸಾಮಾನ್ಯ ಕ್ರಿಕೆಟಿಗ, ತರಬೇತುದಾರ ಹೌದಾದರೂ ಈ ಪ್ರಶಸ್ತಿಗೆ ಅವರ ಹೆಸರು ಸೂಚನೆ ಸರಿಯಿಲ್ಲ. ಇದರಿಂದ ತೆರೆಮರೆಯ ಸಾಧಕರಿಗೆ ಅನ್ಯಾಯವಾಗುತ್ತದೆಂದು ಬಿಸಿಸಿಐನ ಕೆಲ ಮೂಲಗಳು ವಾದಿಸಿವೆ.

ತೆರೆಮರೆಯಲ್ಲಿ ಒಬ್ಬ ಪ್ರತಿಭಾವಂತ ಕ್ರಿಕೆಟಿಗರನ್ನು ಬೆಳೆಸಲು ಕೆಲ ತರಬೇತುದಾರರು ಎಲ್ಲ ತ್ಯಾಗಗಳನ್ನು ಮಾಡಿರುತ್ತಾರೆ. ಕುಲದೀಪ್‌ ಸಿಂಗ್‌, ರಿಷಭ್‌ ಪಂತ್‌, ಯಜುವೇಂದ್ರ ಚಹಲ್‌ರನ್ನು ರೂಪಿಸಿರುವ ವ್ಯಕ್ತಿಗಳು ಮರೆಯಲ್ಲೇ ಇರುತ್ತಾರೆ. ಅಂತಹವರಿಗೆ ನೀಡಬೇಕಾದ ಪ್ರಶಸ್ತಿಗೆ ದ್ರಾವಿಡ್‌ ಹೆಸರನ್ನು ಶಿಫಾರಸು ಮಾಡುವುದು ತಪ್ಪು ಎನ್ನುವುದು ಕೆಲವರ ವಾದ.ಭಾರತ 19 ವಯೋಮಿತಿ ತಂಡ ವಿಶ್ವಕಪ್‌ ಗೆಲ್ಲಲು, ಎ ತಂಡ ಅದ್ಭುತವಾಗಿ ಆಡಲು ದ್ರಾವಿಡ್‌ ಕಾರಣ ಎನ್ನುವುದು ಪ್ರಶ್ನಾತೀತ. ಭಾರತ ಕ್ರಿಕೆಟ್‌ಗೆ ಅವರ ಸೇವೆಯೂ ಹೋಲಿಕೆಯಿಲ್ಲದ್ದು. ಆದರೂ ಈ ಪ್ರಶಸ್ತಿಗೆ ಅವರ ಹೆಸರು ಸೂಚಿಸಬಾರದು ಎಂದು ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next