Advertisement

National Cricket Selection Committee ಸಭೆಗೆ ರಾಹುಲ್‌ ದ್ರಾವಿಡ್‌

11:07 PM Aug 19, 2023 | Team Udayavani |

ಹೊಸದಿಲ್ಲಿ: ಸೋಮವಾರ ನಡೆಯುವ ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆ ಸಮಿತಿ ಸಭೆಯಲ್ಲಿ ಟೀಮ್‌ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ ಕೂಡ ಪಾಲ್ಗೊಳ್ಳ ಲಿದ್ದಾರೆ. ಏಷ್ಯಾ ಕಪ್‌ ಪಂದ್ಯಾವಳಿಗೆ ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಲಿದ್ದು, ಅನಂತರದ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ತಂಡದ ಮಾದರಿಯೊಂದನ್ನು ರೂಪಿಸುವುದು ಈ ಸಭೆಯ ಪ್ರಮುಖ ಅಂಶಗಳಾಗಿವೆ.

Advertisement

ಸಾಮಾನ್ಯವಾಗಿ ಆಯ್ಕೆ ಸಮಿತಿ ಸಭೆಗಳಲ್ಲಿ ತಂಡದ ಕೋಚ್‌ ಭಾಗವಹಿಸುವ ಸಂಪ್ರದಾಯವಿಲ್ಲ. ಮಾಜಿ ಕೋಚ್‌ ರವಿಶಾಸ್ತ್ರೀ ಇಂಥ ಯಾವುದೇ ಸಭೆಗಳಲ್ಲಿ ಪಾಲ್ಗೊಂಡವರಲ್ಲ. ಆದರೆ ಮುಂಬರುವ ಪ್ರಮುಖ ಕ್ರಿಕೆಟ್‌ ಪಂದ್ಯಾವಳಿಗಳ ಹಿನ್ನೆಲೆಯಲ್ಲಿ ದ್ರಾವಿಡ್‌ ಅವರನ್ನು ಆಹ್ವಾನಿಸಲಾಗಿದೆ. ಇದರಿಂದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷ ಅಜಿತ್‌ ಅಗರ್ಕರ್‌ ಅವರಿಗೆ ನೆರವು ಲಭಿಸ ಬಹುದೆಂಬುದು ಬಿಸಿಸಿಐ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next