Advertisement

ಹಿತಾಸಕ್ತಿ ಸಂಘರ್ಷ : ಐಪಿಎಲ್‌ ನಂಟಿಗೆ ಅಂತ್ಯ ಹೇಳುವ ದ್ರಾವಿಡ್‌

03:30 PM Jun 27, 2017 | Team Udayavani |

ಹೊಸದಿಲ್ಲಿ : ಎರಡು ವರ್ಷ ಡೆಲ್ಲಿ ಡೇರ್‌ ಡೆವಿಲ್‌ ತಂಡದ ಕೋಚ್‌ ಆಗಿದ್ದ  ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರು ಈಗಿನ್ನು ಐಪಿಎಲ್‌ ನಂಟನ್ನು ಪೂರ್ತಿಯಾಗಿ ಕಳಚಿಕೊಳ್ಳಲಿದ್ದಾರೆ. ಡೆಲ್ಲಿ ಡೇರ್‌ ಡೆವಿಲ್‌ ತಂಡದ ಮುಂದಿನ ಕೋಚ್‌ ಆಗಲು ಅರ್ಹ ವ್ಯಕ್ತಿಯನ್ನು ಸೂಚಿಸುವಂತೆ ಬಿಸಿಸಿಐ ದ್ರಾವಿಡ್‌ ಅವರನ್ನು ಕೇಳಿಕೊಂಡಿರುವುದಾಗಿ ತಿಳಿದು ಬಂದಿದೆ. 

Advertisement

ಇಂಡಿಯಾ ಎ ಮತ್ತು ಇಂಡಿಯಾ ಅಂಡರ್‌ ನೈನ್‌ಟೀನ್‌ ಕೋಚ್‌ ಆಗಿರುವ ದ್ರಾವಿಡ್‌ ಅವರು ಬಿಸಿಸಿಐ ಜತೆಗೆ 10 ತಿಂಗಳ ಗುತ್ತಿಗೆಯಲ್ಲಿದ್ದು ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಕೋಚ್‌ ಆಗಿರುತ್ತಾ ತನ್ನ ಇತರ ಕೆಲವು ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿದ್ದಾರೆ. 

ಆದರೆ ಈ ನಡುವೆ ರಾಮಚಂದ್ರ ಗುಹಾ ಅವರ ದ್ರಾವಿಡ್‌ ಅವರ ಕಾರ್ಯ ನಿರ್ವಹಣೆಯಲ್ಲಿ  ಹಿತಾಸಕ್ತಿಗಳ ಸಂಘರ್ಷ ಇರುವುದನ್ನು ಕಂಡಿದ್ದು ತಮ್ಮ ಕಟು ಶಬ್ದಗಳ ರಾಜೀನಾಮೆ ಪತ್ರದಲ್ಲಿ ಅವರು, ದ್ರಾವಿಡ್‌ ಅವಳಿ ಪಾತ್ರಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next