ಮುಂಬೈ: ಟೀಂ ಇಂಡಿಯಾದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ಐಸಿಸಿ ಟಿ20 ವಿಶ್ವಕಪ್ ಅಂತ್ಯವಾದ ಬೆನ್ನಲ್ಲೇ ತಂಡದಲ್ಲಿ ಹಲವು ಬದಲಾವಣೆಗಳಾಗಲಿದೆ. ಟಿ20 ತಂಡಕ್ಕೆ ನೂತನ ನಾಯಕ, ತಂಡಕ್ಕೆ ನೂತನ ಕೋಚ್, ಹೀಗೆ ಟೀಂ ಇಂಡಿಯಾ ಹೊಸ ಬದಲಾವಣೆ ಕಾಣಲಿದೆ.
ವಿಶ್ಬಕಪ್ ಬಳಿಕ ರವಿ ಶಾಸ್ತ್ರೀ ಅಧಿಕಾರವಧಿ ಅಂತ್ಯವಾಗುವ ಕಾರಣ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಲಾಗಿದೆ. ಬುಧವಾರ ಬಿಸಿಸಿಐ ನೂತಕ ಕೋಚ್ ನೇಮಕದ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.
ಟಿ20 ವಿಶ್ವಕಪ್ ಬಳಿಕ ನಾಯಕ ವಿರಾಟ್ ಕೊಹ್ಲಿ ಅವರು ಟಿ20 ನಾಯಕತ್ವವನ್ನು ತ್ಯಜಿಸಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ನಾಯಕನ ಘೋಷಣೆಯಾಗಲಿದೆ.
ಇದನ್ನೂ ಓದಿ:ಮೆಲ್ಬೋರ್ನ್ ರೆನಿಗೇಡ್ಸ್ ಸೇರಿದ ಚಾಂದ್: ಬಿಬಿಎಲ್ ಆಡುತ್ತಿರುವ ಮೊದಲ ಭಾರತೀಯ ಆಟಗಾರ
ರಾಹುಲ್ ದ್ರಾವಿಡ್ ಅವರ ನೇಮಕದ ವೇಳೆ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅವುಗಳಲ್ಲಿ ಒಂದು, “ಮುಂದಿನ ಭಾರತೀಯ ಸೀಮಿತ ಓವರ್ ತಂಡದ ನಾಯಕನಾಗಿ ನೀವು ಯಾರನ್ನು ನೋಡುತ್ತೀರಿ?” ಎಂದು. ಇದಕ್ಕೆ ದ್ರಾವಿಡ್ ಅವರ ಮೊದಲ ಆಯ್ಕೆಯಾಗಿ ಅನುಭವಿ ರೋಹಿತ್ ಶರ್ಮಾ, ನಂತರ ಕೆಎಲ್ ರಾಹುಲ್ ಎಂದು ಸೂಚಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನವೆಂಬರ್ 17 ರಂದು ಪ್ರಾರಂಭವಾಗುವ ಮುಂಬರುವ ನ್ಯೂಜಿಲೆಂಡ್ ಸರಣಿಯಿಂದ ದ್ರಾವಿಡ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.