Advertisement
ಕಳೆದ ಟಿ20 ವಿಶ್ವಕಪ್‌ನ ಪವರ್‌ಪ್ಲೇ ಆಟದ ವೇಳೆ ರೋಹಿತ್, ರಾಹುಲ್ ಮತ್ತು ಕೊಹ್ಲಿ ಅವರ ಆಟವನ್ನು ಗಮನಿ ಸಲಾಗಿದೆ. ಮುಂಬರುವ ವಿಶ್ವಕಪ್‌ಗೆ ಮುಂಚಿತವಾಗಿ ಅವರೆಲ್ಲ ತಮ್ಮ ಗುಣ ಮಟ್ಟ ಮತ್ತು ಸಾಮರ್ಥ್ಯಕ್ಕೆ ಅನುಗುಣ ವಾಗಿ ಉತ್ತಮ ನಿರ್ವಹಣೆ ನೀಡುವ ವಿಶ್ವಾಸವಿದೆ ಎಂದವರು ಹೇಳಿದರು.
Related Articles
Advertisement
ಯಶಸ್ವಿ ನಾಯಕರುಐಪಿಎಲ್ ಕೂಟದಲ್ಲಿ ಭಾರತೀಯ ಆಟಗಾರರು ನಾಯಕರಾಗಿಯೂ ಯಶಸ್ಸು ಸಾಧಿಸಿರುವುದು ಭಾರತೀಯ ತಂಡಕ್ಕೆ ಹೆಚ್ಚಿನ ಲಾಭ ತರಲಿದೆ. ನಾಯಕತ್ವದ ಗುಣವು ಕ್ರಿಕೆಟಿಗರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಚೊಚ್ಚಲ ಪ್ರವೇಶದಲ್ಲಿಯೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಕೂಡ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹಲವು ಭಾರತೀಯ ನಾಯಕರು ಶ್ರೇಷ್ಠ ನಿರ್ವಹಣೆ ನೀಡುತ್ತಿರುವುದು ಒಳ್ಳೆಯ ವಿಷಯವಾಗಿದೆ. ಹಾರ್ದಿಕ್ ಅವರಲ್ಲಿ ಒಬ್ಬರಾಗಿದ್ದಾರೆ. ಲಕ್ನೋ ತಂಡದ ಪರ ಕೆಎಲ್ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಐಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ ಯುವ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಂಡದಲ್ಲಿರುವುದು ಒಳ್ಳೆಯ ಸೂಚನೆ ಮತ್ತು ಅವರಿಂದ ಉತ್ತಮ ನಿರ್ವಹಣೆಯನ್ನು ನಿರೀಕ್ಷಿಸಲಾಗಿದೆ ಎಂದು ರಾಹುಲ್ ತಿಳಿಸಿದರು.