Advertisement
ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಮೋದಿಯವರು ಬಂದಾಗಲೆಲ್ಲಾ ಬಿಜೆಪಿ ಗೆದ್ದಿದೆಯಂತೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ದಡಕ್ಕೆ ತಲುಪಿಸಿರುವುದು ಮೋದಿ ಅಲೆಯೇ ಎಂಬುದು ಕರಾವಳಿ ನಾಗರಿಕರ ಲೆಕ್ಕಾಚಾರ. 2008ರಲ್ಲಿ ಹೀಗೆಯೇ ಆಗಿತ್ತಂತೆ. ಈ ವಿಶ್ಲೇಷಣೆ ಇಲ್ಲಿಗೇ ನಿಲ್ಲುವುದಿಲ್ಲ. ಕರಾವಳಿಯಷ್ಟೇ ಅಲ್ಲ, ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದರೋ ಅಲ್ಲೆಲ್ಲಾ ಕಾಂಗ್ರೆಸ್ ಸೋತಿದೆಯಂತೆ !
ಎ. 27ರಂದು ಚುನಾವಣೆ ಘೋಷಣೆಯಾದ ಬಳಿಕ ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ರಾಹುಲ್ ಗಾಂಧಿ ನಿರಂತರ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭ ಸಮಾವೇಶಗಳು, ಸಂವಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿಯನ್ನೂ ನಡೆಸಿದ್ದರು. ರಾಹುಲ್ ಅವರೊಂದಿಗೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದ ರಾಮಯ್ಯ ಮತ್ತಿತರ ಪಡೆಯೇ ಇತ್ತು. ಆದರೆ ಇದ್ಯಾವುದೂ ಈ ಬಾರಿ ಕಾಂಗ್ರೆಸ್ ಪರ ದೊಡ್ಡ ಪ್ರಮಾಣದಲ್ಲಿ ವಕೌìಟ್ ಆಗಿಲ್ಲ. 2013ರಲ್ಲಿ ಕಾಂಗ್ರೆಸ್ ಒಟ್ಟು 43 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದು, ಅದೇ ಕ್ಷೇತ್ರಗಳಲ್ಲಿ ಈ ಬಾರಿಯೂ ಇದೇ ಕ್ಷೇತ್ರಗಳಲ್ಲಿ ರಾಹುಲ್ ಸಂಚರಿಸಿದ್ದರು. ಈ ಬಾರಿ 31 ಸ್ಥಾನಗಳನ್ನು ಗೆದ್ದು 12 ಸ್ಥಾನಗಳನ್ನು ಬಿಜೆಪಿಗೆ ಬಿಟ್ಟು ಕೊಟ್ಟಿದೆ. ಅರ್ಥಾತ್ ರಾಹುಲ್ ಸಮಾವೇಶ ನಡೆಸಿದಲ್ಲಿ ಕಮಲ ಅರಳಿದೆ.
Related Articles
ಕರಾವಳಿಯಲ್ಲೂ ರಾಹುಲ್ ಗಾಂಧಿ ಅವರು 3 ಬಾರಿ ಜನಾಶೀರ್ವಾದ ಯಾತ್ರೆ ಹೆಸರಲ್ಲಿ ಸಂಚರಿಸಿದ್ದರು. ಒಂದು ಬಾರಿ ಮಂಗಳೂರಿನಲ್ಲಿ ಸಮಾವೇಶದಲ್ಲಿ ಭಾಗಿಯಾದರೆ, ಮತ್ತೂಮ್ಮೆ ಕಾಪುವಿನಲ್ಲಿ, ಬಿ.ಸಿ. ರೋಡಿನಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಆದರೆ ಇಲ್ಲಿ ಉಳ್ಳಾಲ ಬಿಟ್ಟರೆ, ಉಳಿ ದೆಲ್ಲೆಡೆ ಕಾಂಗ್ರೆಸ್‌ಗೆ ಭಾರೀ ನಷ್ಟವಾಗಿದೆ.
Advertisement
ಮೋದಿ ನಡೆದಲ್ಲೆಲ್ಲ ಕಮಲಪ್ರಧಾನಿ ಮೋದಿಯವರ ಭೇಟಿಯಿಂದ ಹೆಚ್ಚು ಲಾಭ ಪಡೆದದ್ದು ಉಡುಪಿ ಜಿಲ್ಲೆ. ಯಾಕೆಂದರೆ ಒಬ್ಬ ಹಾಲಿ ಶಾಸಕರನ್ನು ಬಿಟ್ಟರೆ (ಐದು ವರ್ಷದ ಕಾರ್ಯ ಸಾಧನೆ ಅವರ ಬೆನ್ನಿಗಿತ್ತು) ಉಳಿದವರೆಲ್ಲರೂ ಮೋದಿ ಜನಪ್ರಿಯತೆಯ ಅಲೆಯಲ್ಲೇ ದಡ ತಲುಪಿದವರು. ಈ ಬಾರಿ ಮೋದಿ ಒಟ್ಟು 210 ಕ್ಷೇತ್ರಗಳನ್ನು ತಲುಪುವ ರೀತಿ 23 ಪ್ರದೇಶಗಳಲ್ಲಿ ಪ್ರಚಾರ ಸಭೆ ನಡೆಸಿದ್ದರು. ಎಲ್ಲೆಡೆ ಸ್ಥಳೀಯ ವಿಚಾರಗಳನ್ನು ಹೆಚ್ಚಾಗಿ ಪ್ರಸ್ತಾವಿಸಿದ್ದು, ಬಿಜೆಪಿಗೆ ಚೆನ್ನಾಗಿ ಲಾಭ ಉಂಟುಮಾಡಿತು. ಪರಿಣಾಮ 90 ಕಡೆ ತಾವರೆ ಅರಳಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಅಂತರದಲ್ಲಿ ಗೆದ್ದ ಪ್ರದೇಶ, ಜೆಡಿಎಸ್ ಪ್ರಾಬಲ್ಯದ ಸುಮಾರು 23 ಕ್ಷೇತ್ರಗಳ ಪೈಕಿ ಮೋದಿ ಅಲೆಗೆ 16 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಸೋತಿರುವುದು ಬರೀ ಆರರಲ್ಲಿ. ಬೃಹತ್ ಬೆಂಗಳೂರಿನಲ್ಲೇ 30 ಸ್ಥಾನಗಳಲ್ಲಿ 11ರಲ್ಲಿ ಮೋದಿ ಮ್ಯಾಜಿಕ್ ಫಲ ನೀಡಿದೆ.