ಅಮೇಠಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ತಮ್ಮ ಲೋಕಸಭಾ ಕ್ಷೇತ್ರವಾದ ಅಮೇಠಿ ಭೇಟಿಗೆ ಸಾಗುತ್ತಿರುವಂತೆಯೇ ಅಮೇಠಿಯಲ್ಲೀಗ 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಸಿಕೊಂಡ ಪೋಸ್ಟರ್ ವಾರ್ ಆರಂಭವಾಗಿರುವುದು ಕಂಡು ಬಂದಿದೆ.
ಅಮೇಠಿಯಲ್ಲಿ ರಾರಾಜಿಸುತ್ತಿರುವ ಪೋಸ್ಟರ್ ಒಂದರಲ್ಲಿ ರಾಹುಲ್ ಗಾಂಧಿಯನ್ನು ಶ್ರೀರಾಮನಾಗಿಯೂ ಪ್ರಧಾನಿ ಮೋದಿಯನ್ನು ರಾವಣನನ್ನಾಗಿಯೂ ಕಾಣಿಸಲಾಗಿದೆ.
“ರಾಹುಲ್ ರೂಪ್ ಮೇ ಭಗವಾನ್ ರಾಮ್ ಕಾ ಅವತಾರ್, 2019 ಮೇ ಆಯೇಗಾ ರಾಹುಲ್ ರಾಜ್’ ಎಂಬ ಘೋಷ ವಾಕ್ಯ ಈ ಪೋಸ್ಟರ್ ನಲ್ಲಿ ಆಕರ್ಷಕವಾಗಿ ಕಾಣಿಸಲಾಗಿದೆ.
ಇನ್ನೊಂದು ಪೋಸ್ಟರ್‌ನಲ್ಲಿ ರಾಹುಲ್ ಅವರನ್ನು ಶ್ರೀಕೃಷ್ಣ ನಾಗಿ ಕಾಣಿಸಲಾಗಿದೆ. ಸಂಘರ್ಷ್ ಸೇ ವಿಜಯ್ ಕೀ ಓರ್ ಚಲ್ ದಿಯೇ ಮಹಾರಥಿ ಎಂಬ ಘೋಷ ವಾಕ್ಯ ಈ ಪೋಸ್ಟರ್‌ನಲ್ಲಿ ಇದೆ.
ಅಂದ ಹಾಗೆ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಅಮೇಠಿಗೆ ಭೇಟಿ ನೀಡುತ್ತಿದ್ದಾರೆ. ಅಮೇಠಿಯಲ್ಲಿ ಏಳು ಕಡೆಗಳಲ್ಲಿ ಅವರು ರೋಡ್ ಶೋ ನಡೆಸಲಿದ್ದಾರೆ.
ಪಕ್ಷದ ಕಾರ್ಯಕರ್ತರು ರಾಹುಲ್‌ಗೆ ಅಮೇಠಿಯಲ್ಲಿ ಭವ್ಯ ಸ್ವಾಗತದ ಏರ್ಪಾಡು ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಅಮರ್ ನಾಥ್ ತಿಳಿಸಿದ್ದಾರೆ.