ಕೆಜಿಎಫ್: ಕ್ಯಾಸಂಬಳ್ಳಿ ಹೋಬಳಿ ಶ್ರೀನಿವಾಸಸಂದ್ರ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಬಿಜೆಪಿ ಬೆಂಬಲಿತರಾದ ರಘು ಮತ್ತು ಶೋಭಾ ಶ್ರೀನಿವಾಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದರು.
ಫೆ.9ರಂದು ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಶಾಸಕಿ ರೂಪಕಲಾ, ಆಕ್ರೋಶ ವ್ಯಕ್ತಪಡಿಸಿದ್ದರಿಂದ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ಡಾ.ರಾಮು ಪ್ರಕಟಿಸಿದ್ದರು. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆದಿತ್ತು. ಸೋಮವಾರ ಚುನಾವಣೆ ಪ್ರಕ್ರಿಯೆ ಪುನಃ ಪ್ರಕಟಿಸಲಾಗಿತ್ತು. ಬೆಳಗ್ಗೆ 9 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ತಾವು ಹಿಂದೆ ನಡೆದ ಚುನಾವಣೆಗೆ ಸಮ್ಮತಿ ತೋರಿದ್ದೇವೆ ಎಂದು ನಡವಳಿಕೆಯಲ್ಲಿ ದಾಖಲಿಸಿಹೊರ ನಡೆದರು. ಉಳಿದ ಹತ್ತು ಸದಸ್ಯರು ಚುನಾವಣೆ ನಡೆಸುವಂತೆ ಕೋರಿದರು.
ಆದರೆ ಚುನಾವಣಾಧಿಕಾರಿಹಿಂದಿನ ಚುನಾವಣೆ ಪ್ರಕ್ರಿಯೆಯಂತೆ ಚುನಾವಣೆ ನಡೆಸಲಾಗಿದೆ. ಅಜ್ಞಾತ ಸ್ಥಳಕ್ಕೆ ತೆರಳಿದರು:ರಘು ಅಧ್ಯಕ್ಷರಾಗಿ, ಶೋಭಾ ಶ್ರೀನಿವಾಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ನಡವಳಿಕೆ ಪ್ರತಿಯಲ್ಲಿ ನಮೂದಿಸಿದರು. ನಂತರ ಪೊಲೀಸ ಅಧಿಕಾರಿ ಜೊತೆಯಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದರು.
ಚುನಾವಣಾಧಿಕಾರಿ ಪುನಃ ಚುನಾವಣೆ ನಡೆಸಲಿಲ್ಲ ಎಂದು ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕಿ ರೂಪಕಲಾ ನೇತೃತ್ವದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕಿ ಜಿಲ್ಲಾಧಿಕಾರಿಯನ್ನುಮೊಬೈಲ್ ಮೂಲಕ ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದರು. ಜಿಲ್ಲಾಧಿಕಾರಿ ಸೂಚನೆಯಂತೆ ಉಪ ವಿಭಾಗಾಧಿಕಾರಿ ಸೋಮಶೇಖರ್ ಗ್ರಾಮಕ್ಕೆ ಆಗಮಿಸಿದರು.
ಅಕ್ರಮ ನಡೆದಿರುವ ಆರೋಪ: ನಾನೇನುಚುನಾವಣಾಧಿಕಾರಿಯಲ್ಲ. ದಾಖಲೆ ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇನೆ ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್ ಆಶ್ವಾಸನೆ ನೀಡಿದರು. ಉಪ ವಿಭಾಗಾಧಿಕಾರಿ ಮಾತಿನಿಂದ ಸಮಾಧಾನವಾಗದ ಶಾಸಕಿ, ಬೆಂಬಲಿಗರೊಡನೆಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಸಮಾಧಾನ ವ್ಯಕ್ತಪಡಿಸಿ ಚುನಾವಣೆ ನಡೆಸಿದ ಕ್ರಮ ಸರಿಯಿಲ್ಲ, ಅಕ್ರಮ ನಡೆದಿದೆ ಎಂದು ಆರೋಪಿಸಿದರು.
ನ್ಯಾಯ ಸಿಕ್ಕಿದೆ: ಹಿಂದಿನ ಚುನಾವಣೆಯಲ್ಲಿ ರಘುರವರಿಗೆ 10 ಮತಗಳು ಬಂದಿದ್ದವು. ಅದರಂತೆ ಅವರು ಅಧ್ಯಕ್ಷರಾಗಿ, ಶೋಭಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಾವು ವಿಜಯೋತ್ಸವ ಆಚರಣೆ ಮಾಡಲು ಹೋದ ನಂತರ, ಬಂದ ಶಾಸಕಿ ದೌರ್ಜನ್ಯ ನಡೆಸಿದ್ದಾರೆ. ನಮಗೆ ನ್ಯಾಯ ಸಿಕ್ಕಿದೆ ಎಂದು ಬಿಜೆಪಿ ಗ್ರಾಮಾಂತರ ವಿಭಾಗದ ಅಧ್ಯಕ್ಷ ಜಯಪ್ರಕಾಶ್ ನಾಯ್ಡು ಹೇಳಿದರೆ, ಬಿಜೆಪಿಯವರು 8 ಪಂಚಾಯಿತಿ ಹಿಡಿದಿದ್ದೇವೆ ಎಂದು ಮುಖಂಡ ನವೀನ್‌ರಾಮ ಹೇಳಿದರು.