Advertisement
ಪೂರ್ಣ ಕಾಲೀನ ಅಧ್ಯಾಪನ ಹುದ್ದೆಯನ್ನು ತೊರೆಯುವ ಯಾವುದೇ ಆಲೋಚನೆ ಸದ್ಯಕ್ಕೆ ತನ್ನಲ್ಲಿ ಇಲ್ಲ ಎಂದು ರಘುರಾಮ ರಾಜನ್ ಹೇಳಿದ್ದಾರೆ.
Related Articles
Advertisement
ರಾಜನ್ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ನಾಮಕರಣ ಮಾಡುವ ಕುರಿತು ಆಮ್ ಆದ್ಮಿ ಪಕ್ಷ ತನ್ನ ಸಭೆಯಲ್ಲಿ ಚರ್ಚಿಸಿತ್ತು. ಅಂತೆಯೇ ಅದು ರಾಜನ್ ಗೆ ಈ ಸಂಬಂಧ ಅಧಿಕೃತ ಇ-ಮೇಲ್ ರವಾನಿಸಿತ್ತು; ರಾಜನ್ ಇದಕ್ಕೆ ಧನಾತ್ಮಕವಾಗಿ ಉತ್ತರಿಸುವರೆಂಬ ನಿರೀಕ್ಷೆ ಆಪ್‌ಗೆ ಇತ್ತು.
ಆರ್‌ಬಿಐ ಗವರ್ನರ್ ಹುದ್ದೆಯಿಂದ ಇಳಿದ ಬಳಿಕ ರಾಜನ್ ಅವರ ಹೆಸರು ನೊಬೆಲ್ ಅರ್ಥಶಾಸ್ತ್ರ ಪಾರಿತೋಷಕಕ್ಕೆ ಸೂಚಿಸಲ್ಪಟ್ಟಿರುವುದಾಗಿ ವರದಿಯಾಗಿತ್ತು. ಅನಂತರ ರಾಜನ್ ಅವರ ಹೆಸರನ್ನು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಮುಖ್ಯಸ್ಥನ ಹುದ್ದೆಗೆ ಬ್ಯಾರನ್ ಸಂಸ್ಥೆ ಶಿಫಾರಸು ಮಾಡಿರುವುದಾಗಿ ವರದಿಯಾಗಿತ್ತು. ಹಾಗಾಗಿ ರಾಜನ್ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿತ್ತು.
ಇಂಟರ್‌ನ್ಯಾಶನಲ್ ಮಾನಿಟರಿ ಫಂಡ್ (ಐಎಂಎಫ್) ಇದರ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿರುವ ರಾಜನ್, 1992ರ ಬಳಿಕದಲ್ಲಿ ಆರ್‌ಬಿಐ ಗವರ್ನರ್ ಆಗಿ ಐದು ವರ್ಷಗಳ ಅವಧಿ ಪೂರೈಸಿದ ಮೊದಲ ಗವರ್ನರ್ ಎನಿಸಿಕೊಂಡಿದ್ದಾರೆ.