Advertisement

Raghu Thatha: ಕೀರ್ತಿ ಸುರೇಶ್‌ ʼರಘು ತಾತʼನ ಬಗ್ಗೆ ಹೊಸ ಅಪ್ಡೇಟ್‌ ಕೊಟ್ಟ ಹೊಂಬಾಳೆ

06:23 PM Dec 19, 2023 | Team Udayavani |

ಚೆನ್ನೈ: ಭಾರತೀಯ ಸಿನಿರಂಗದಲ್ಲಿ ʼಹೊಂಬಾಳೆ ಫಿಲ್ಮ್ಸ್‌ʼ ನಿರ್ಮಾಣ ಮಾಡಿದ ಸಿನಿಮಾಗಳೆಲ್ಲಾ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ʼಸಲಾರ್‌ʼ ಸಿನಿಮಾದ ಮೂಲಕ ಮತ್ತೊಂದು ದೊಡ್ಡ ಹಿಟ್‌ ಕೊಡುವ ನಿರೀಕ್ಷೆಯಲ್ಲಿರುವ ಹೊಂಬಾಳೆ ಫಿಲ್ಮ್ಸ್‌ ಹೊಸ ಸಿನಿಮಾವೊಂದರ ಬಗ್ಗೆ ಅಪ್ಡೇಟ್‌ ನೀಡಿದೆ.

Advertisement

ಸಾಲು ಸಾಲು ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ ಕನ್ನಡ, ತೆಲುಗು ಬಳಿಕ ಇದೀಗ ಕಾಲಿವುಡ್‌ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದೆ. ಕಳೆದ ಕೆಲ ಸಮಯದ ಹಿಂದೆ ಈ ಬಗ್ಗೆ ಹೊಂಬಾಳೆ ಅನೌನ್ಸ್‌ ಮಾಡಿತ್ತು. ಕೀರ್ತಿ ಸುರೇಶ್‌ ಪ್ರಧಾನ ಪಾತ್ರದಲ್ಲಿರುವ ʼರಘು ತಾತʼ ಸಿನಿಮಾವನ್ನು ನಿರ್ಮಾಣ ಮಾಡುವ ಬಗ್ಗೆ ಹೊಂಬಾಳೆ ಹೇಳಿತ್ತು. ಇದೀಗ ಈ ಸಿನಿಮಾದ ಬಗ್ಗೆ ಹೊಸ ಮಾಹಿತಿಯನ್ನು ಹಂಚಿಕೊಂಡಿದೆ.

ಸುಮನ್‌ ಕುಮಾರ್‌ ನಿರ್ದೇಶನದ ʼರಘು ತಾತʼ ಮಹಿಳಾ ಹಾಗೂ ಹಾಸ್ಯ ಪ್ರಧಾನ ಕಥೆಯನ್ನೊಳಗೊಂಡಿದೆ. ಕಾಲಿವುಡ್‌ ನ ʼಮಹಾನಟಿʼ ಕೀರ್ತಿ ಸುರೇಶ್‌ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ ಸಿನಿಮಾದ  ಬ್ಯಾನರ್‌ ನ್ನು ಎತ್ತಿಕೊಂಡು ಹೋಗುವ ದೃಶ್ಯವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಶೀಘ್ರದಲ್ಲಿ ತೆರೆಗೆ ಬರಲಿದೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಹೇಳಿದೆ.

ʼದಸರಾʼ ಬಳಿಕ ಕೀರ್ತಿ ಸುರೇಶ್‌ ʼರಘು ತಾತʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ಸಿನಿಮಾ ತೆರೆ ಕಾಣಲಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next