ನವದೆಹಲಿ: ರಫೇಲ್ ಖರೀದಿ ವೇಳೆ ಲಂಚ ಕೊಡಲಾಗಿದೆ ಎಂದು ಕಾಂಗ್ರೆಸ್ ವಿನಾಕಾರಣ ಗುಲ್ಲೆಬ್ಬಿಸುತ್ತಿದೆ ಎಂದು ಬಿಜೆಪಿ ವಕ್ತಾರ ಸಂಭಿತ್ ಪಾತ್ರಾ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದರೆ “ಐ ನೀಡ್ ಕಮಿಷನ್’ ಎಂದು ಟೀಕಿಸಿದ್ದಾರೆ.
ರಫೇಲ್ ವಿಚಾರದಲ್ಲಿ ಇಷ್ಟು ವರ್ಷಗಳ ವರೆಗೆ ಏಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಸುಳ್ಳನ್ನೇ ಹೇಳುತ್ತಿತ್ತು ಎಂಬುದರ ಬಗ್ಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟನೆ ನೀಡಲಿ.
2007-2012ರ ವರೆಗೆ ಅಧಿಕಾರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ನಡೆಸಿದ್ದ ವೇಳೆ, ಯಾವ ಮಧ್ಯರ್ತಿಯ ಹೆಸರಿನಲ್ಲಿ ಕಮಿಷನ್ ಕೇಳಲಾಗಿತ್ತು ಎಂಬ ಅಂಶವೂ ಬಹಿರಂಗವಾಗಿದೆ ಎಂದು ಪಾತ್ರಾ ಟೀಕಿಸಿದ್ದಾರೆ.
ಇದನ್ನೂ ಓದಿ:ಮಹಿಳಾ ವಿವಿಯಿಂದ ಶಿಷ್ಟಾಚಾರ ಉಲ್ಲಂಘನೆ : ಹರಿಹಾಯ್ದ ಸಂಸದ ಜಿಗಜಿಣಗಿ
ರಫೇಲ್ ಖರೀದಿಗಾಗಿ ಶೇ.40ರ ಪ್ರಮಾಣದಲ್ಲಿ ಕಮಿಷನ್ ಕೊಡಬೇಕು ಎಂದು ಒಪ್ಪಂದದಲ್ಲಿ ಉಲ್ಲೇಖೀಸಲಾಗಿತ್ತು. ರಾಹುಲ್ ಮತ್ತು ಸೋನಿಯಾ ಅವರೇ, ಕಮಿಷನ್ ಪಡೆಯುವಲ್ಲೂ ನೀವು ಜಗತ್ತಿನಲ್ಲಿ ದಾಖಲೆ ಮಾಡಿದ್ದೀರಿ ಎಂದು ಸಂಭಿತ್ ಪಾತ್ರ ವ್ಯಂಗ್ಯವಾಡಿದ್ದಾರೆ.