Advertisement
ಹರ್ಯಾಣದ ಅಂಬಾಲಾದಲ್ಲಿ ನಡೆದ ಈ ಕಾರ್ಯ ಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ, ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್, ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಆರ್.ಕೆ.ಎಸ್.ಬಧೌರಿಯಾ ಸೇರಿ ಪ್ರಮುಖರು ಭಾಗವಹಿಸಿದ್ದರು.
ಸೇನೆಗೆ ರಫೇಲ್ ಸೇರ್ಪಡೆ ವೇಳೆ ಸರ್ವ ಧರ್ಮ ಪೂಜೆ, ಸಾರಂಗ್, ತೇಜಸ್ ಪಡೆಗಳಿಂದ ವೈಮಾನಿಕ ಪ್ರದರ್ಶನ ನಡೆಯಿತು. ಭಾರತ ಫ್ರಾನ್ಸ್ ಜತೆ 36 ಯುದ್ಧ ವಿಮಾನಗಳ ಖರೀದಿಗಾಗಿ 59 ಸಾವಿರ ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರಲ್ಲಿ ಐದು ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಪೈಲಟ್ ಗಳ ತರಬೇತಿಗಾಗಿ ಫ್ರಾನ್ಸ್ ನಲ್ಲೇ ಇದ್ದು, ಉಳಿದ 5 ರಫೇಲ್ ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿದ್ದವು.
Related Articles
Advertisement
*3 ಯುದ್ಧ ವಿಮಾನಗಳಲ್ಲಿ ಸಿಂಗಲ್ ಸೀಟ್ ಹಾಗೂ ಎರಡು ವಿಮಾನಗಳಲ್ಲಿ ಡಬ್ಬಲ್ ಸೀಟ್ ಹೊಂದಿದ್ದು, ಅಂಬಾಲಾ ವಾಯುನೆಲೆಯಲ್ಲಿ ಇವೆ.
*ರಫೇಲ್ ಅವಳಿ ಎಂಜಿನ್ ಹೊಂದಿದ್ದು, ಇದೊಂದು ಅತ್ಯಾಧುನಿಕ ಮಲ್ಟಿ ರೋಲ್ ನ ಯುದ್ಧ ವಿಮಾನವಾಗಿದೆ.
*ಫ್ರೆಂಚ್ ಏರ್ ಕ್ರಾಫ್ಟ್ ಡಸಾಲ್ಟ್ ರಫೇಲ್ ಯುದ್ಧ ವಿಮಾನವನ್ನು ನಿರ್ಮಿಸಿದೆ.
*ಒಂದು ಗಂಟೆಗೆ 2,223 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ.
*ರಫೇಲ್ ಯುದ್ಧ ವಿಮಾನದ ತೂಕ 24,500 ಕೆಜಿ
*3,700 ಕಿಲೋ ಮೀಟರ್ ದೂರದವರೆಗೆ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ.
*9,500 ಕೆಜಿ ಭಾರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.