Advertisement

ರಫೇಲ್‌ ಪಾಲುದಾರರ ವಿವರ ಶೀಘ್ರ ಬಹಿರಂಗ

08:05 AM Oct 26, 2018 | Team Udayavani |

ಮುಂಬಯಿ: ರಫೇಲ್‌ ಒಪ್ಪಂದದಲ್ಲಿ ಯಾವ ಕಂಪೆನಿಗಳು ಪಾಲುದಾರರಾಗಿರುತ್ತವೆ ಎಂಬ ವಿವರಗಳು ಖರೀದಿ ಪ್ರಕ್ರಿಯೆ ಆರಂಭವಾದ ನಂತರ ಬಹಿರಂಗಗೊಳ್ಳಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ರಫೇಲ್‌ ಯುದ್ಧ ವಿಮಾನ ಪೂರೈಕೆಯಲ್ಲಿ ಡಸ್ಸಾಲ್ಟ್ ಹಾಗೂ ಎರಡು ಅಥವಾ ಮೂರು ಕಂಪೆನಿಗಳು ಭಾಗವಹಿಸುತ್ತಿವೆ. ಪ್ರತಿಯೊಂದು ಕಂಪೆನಿಯೂ ಭಾರತದ ಕಂಪೆನಿಗಳ ಜೊತೆ ಸಹಭಾಗಿತ್ವ ಸಾಧಿಸಲಿದೆ. ಹೀಗಾಗಿ ಖರೀದಿ ಪ್ರಕ್ರಿಯೆ ಆರಂಭವಾದ ಮೇಲೆ ಕಂಪೆನಿಗಳು ಬಿಲ್‌ಗ‌ಳನ್ನು ರಕ್ಷಣಾ ಸಚಿವಾಲಯಕ್ಕೆ ಸಲ್ಲಿಸಿ ದಾಗ ಸಮಗ್ರ ಪಾಲುದಾರರ ವಿವರಗಳು ತಿಳಿಯಲಿವೆ ಎಂದಿದ್ದಾರೆ.

Advertisement

ಸುಳ್ಳು ಹೇಳುತ್ತಿದ್ದಾರೆ ರಾಹುಲ್‌: ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಪ್ರತಿನಿತ್ಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸುಳ್ಳು ಉತ್ಪಾದನೆ ಮಾಡುತ್ತಿದ್ದಾರೆ. ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಸುಳ್ಳು ಹರಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next