Advertisement
2016ರಲ್ಲಿ ಟೀವಿ ಸಂದರ್ಶನ ನೀಡಿದ್ದ ಬ್ಯಾಶೆಲೆಟ್, 2012ರಲ್ಲಿ ನಡಾಲ್ ಗಾಯದ ಕಾರಣ ನೀಡಿ 6 ತಿಂಗಳು ಸುಳ್ಳೇ ವಿಶ್ರಾಂತಿ ಪಡೆದಿದ್ದರು. ವಾಸ್ತವವಾಗಿ ಆಗ ಅವರು ಉದ್ದೀಪನ ಸೇವಿಸಿದ್ದರು. ಅದರಿಂದ ತಪ್ಪಿಸಿಕೊಳ್ಳಲು ಗಾಯದ ನಾಟಕವಾಡಿದರು ಎಂದು ಆರೋಪಿಸಿದ್ದರು. ಇದನ್ನು ಅಲ್ಲಗಳೆದಿರುವ ನಡಾಲ್, ಪ್ರತಿಬಾರಿ ಉದ್ದೀಪನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಇಷ್ಟಾದ ನಂತರವೂ ಇಂತಹ ಆರೋಪಗಳನ್ನು ಮಾಡುವವರಿಗೆ ಸರಿಯಾದ ಪಾಠ ಕಲಿಸಬೇಕು, ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆಂದು ಹೇಳಿದ್ದಾರೆ. ಈ ಕುರಿತ ತೀರ್ಪು ನ.16ರಂದು ಪ್ರಕಟವಾಗಲಿದೆ. Advertisement
ಫ್ರಾನ್ಸ್ ಮಾಜಿ ಸಚಿವೆ ವಿರುದ್ಧ ನಡಾಲ್‌ರಿಂದ ಮಾನನಷ್ಟ ಮೊಕದ್ದಮೆ
07:55 AM Oct 15, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.