Advertisement

Madrid Open ನಾಲ್ಕನೇ ಸುತ್ತಿನಲ್ಲಿ ಸೋಲು: ಮ್ಯಾಡ್ರಿಡ್‌ಗೆ ನಡಾಲ್‌ ವಿದಾಯ

12:57 AM May 02, 2024 | Team Udayavani |

ಮ್ಯಾಡ್ರಿಡ್‌: ರಫೆಲ್‌ ನಡಾಲ್‌ ಅವರ ತವರಿನ “ಮ್ಯಾಡ್ರಿಡ್‌ ಓಪನ್‌’ ಆಟ ಸೋಲಿನೊಂದಿಗೆ ಮುಗಿದಿದೆ. ಕೊನೆಯ ಸಲ ಈ ಪಂದ್ಯಾವಳಿಯಲ್ಲಿ ಆಡಲಿಳಿದ ಸ್ಪೇನಿಗನ ಆಟ 4ನೇ ಸುತ್ತಿಗೇ ಮುಗಿದಿದೆ.

Advertisement

ಮ್ಯಾಡ್ರಿಡ್‌ನ‌ಲ್ಲಿ 5 ಸಲ ಚಾಂಪಿಯನ್‌ ಆಗಿ ಮೂಡಿಬಂದಿದ್ದ ರಫೆಲ್‌ ನಡಾಲ್‌ ಅವರನ್ನು ಜೆಕ್‌ ಆಟಗಾರ ಜಿರಿ ಲೆಹೆಕ 7-5, 6-4 ಅಂತರದಿಂದ ಮಣಿಸಿದರು. ಅನಂತರದ ಭಾವುಕರಾಗಿ ಮಾತನಾಡಿದ ನಡಾಲ್‌, “ಇದೊಂದು ಕಠಿನ ದಿನ. ಆದರೆ ಅನಿವಾರ್ಯ.

ನನ್ನ ದೇಹ ಕಳೆದ ಕೆಲವು ದಿನಗಳಿಂದ ಋಣಾತ್ಮಕ ಸಂದೇಶವನ್ನು ರವಾನಿಸುತ್ತಲೇ ಇದೆ. ತವರಿನ ಕೋರ್ಟ್‌ಗೆ ಗುಡ್‌ಬೈ ಹೇಳಲು ಸೂಚಿಸುತ್ತಿದೆ. ನನ್ನ ಪಾಲಿನ ಅತ್ಯಂತ ಭಾವುಕ ಕ್ಷಣ ಇದಾಗಿದೆ. ನನ್ನ ಗ್ರ್ಯಾನ್‌ಸ್ಲಾಮ್‌ ಗೆಲುವುಗಳಲ್ಲಿ ಮಾಡ್ರಿಡ್‌ ಪಾತ್ರ ಮಹತ್ವದ್ದಾಗಿದೆ. ಇಲ್ಲಿನ ನೆನಪುಗಳು ನನ್ನೊಂದಿಗೆ ಸದಾ ಉಳಿಯಲಿವೆ’ ಎಂದರು.

ಬೋಪಣ್ಣ-ಮ್ಯಾಥ್ಯೂ ಪರಾಭವ
ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಮತ್ತು ಮ್ಯಾಥ್ಯೂ  ಜೋಡಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿದೆ. ಇವ ರೆದು ರಿನ ಪಂದ್ಯವನ್ನು ಅಮೆರಿಕದ ಸೆಬಾಸ್ಟಿಯನ್‌ ಕೋರ್ಡ ಮತ್ತು ಆಸ್ಟ್ರೇಲಿಯದ ಜೋರ್ಡನ್‌ ಥಾಮ್ಸನ್‌ 7 -6 (4), 7 -5 ಅಂತರ ದಿಂದ ಗೆದ್ದರು. ಆಸ್ಟ್ರೇಲಿಯನ್‌ ಓಪನ್‌ ಜಯಿಸಿದ್ದ ಬೋಪಣ್ಣ- ಎಬೆxನ್‌ ಜೋಡಿಗೆ ಈ ಸೋಲು ಅನಿರೀಕ್ಷಿತ ಆಘಾತವಿಕ್ಕಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next