Advertisement

ಬಾಲಿವುಡ್‌ನ‌ಲ್ಲಿ ವರ್ಣಭೇದ: ನಟ ಸಿದ್ದಿಕಿ ಅಸಮಾಧಾನ

04:00 AM Jul 19, 2017 | Team Udayavani |

ಮುಂಬಯಿ: ಬಾಲಿವುಡ್‌ನ‌ಲ್ಲಿ ಕಲಾವಿದರ ಬಣ್ಣದ ವಿಚಾರದಲ್ಲಿ ತಾರತಮ್ಯ ನಡೆಯುತ್ತದೆ ಎಂಬಂಥ ಮಾತುಗಳನ್ನು ನಟ ನವಾಜುದ್ದೀನ್‌ ಸಿದ್ದೀಕಿ ಆಡಿದ್ದಾರೆ. ಟ್ವಿಟರ್‌ನಲ್ಲಿ ವರ್ಣಭೇದದ ಕುರಿತು ಸೂಚ್ಯವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ ರುವ ಅವರು, “ನಾನು ಕಪ್ಪಗಿದ್ದೇನೆ ಮತ್ತು ಸುಂದರವಾಗಿಲ್ಲದ ಕಾರಣ ನಾನು ಬೆಳ್ಳಗಿರುವವರ ಜೊತೆ ನಟಿಸಿದರೆ ಚೆನ್ನಾಗಿರುವುದಿಲ್ಲವೆಂದು ಅರ್ಥ ಮಾಡಿಸಿದ್ದಕ್ಕೆ ಧನ್ಯವಾದಗಳು. ಇಷ್ಟು ದಿನ ನನಗದರ ಬಗ್ಗೆ ಅರಿವಿರಲಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ. ಆದರೆ ಅವರು ಯಾರ ಹೆಸರನ್ನೂ ಉಲ್ಲೇಖೀಸಿಲ್ಲ. ಆದರೆ, ಬಾಬುಮೋಶೈ ಬಂದೂಕ್‌ಬಾಜ್‌ ನಿರ್ದೇಶಕರನ್ನು ಉದ್ದೇಶಿಸಿ ಅವರು ಈ ಟ್ವೀಟ್‌ ಮಾಡಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next