Advertisement

ಜನಾಂಗೀಯ ನಿಂದನೆ ಕಾಟ?

07:04 PM Nov 29, 2019 | Lakshmi GovindaRaj |

ಜನಾಂಗೀಯ ನಿಂದನೆ ಎನ್ನುವುದು ವಿಶ್ವಕ್ಕೆ ಅಂಟಿದ ಕಳಂಕ. ಇಪ್ಪತ್ತೂಂದನೇ ಶತಮಾನದಲ್ಲಿದ್ದರೂ ಈ ಪಿಡುಗಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕ್ರೀಡಾ ಕ್ಷೇತ್ರದಲ್ಲೂ ಜನಾಂಗೀಯ ನಿಂದನೆ ಪ್ರಕರಣಗಳು ಹೆಚ್ಚುತ್ತಿವೆ. ಇದು ಆತಂಕಕಾರಿ ಬೆಳವಣಿಗೆ. ಇತ್ತೀಚೆಗೆ ಇಂಗ್ಲೆಂಡ್‌ -ನ್ಯೂಜಿಲೆಂಡ್‌ ನಡುವಿನ ವೆಲ್ಲಿಂಗ್ಟನ್‌ ಟೆಸ್ಟ್‌ ವೇಳೆ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ ಅಭಿಮಾನಿಯೊಬ್ಬನಿಂದ ಜನಾಂಗೀಯ ನಿಂದನೆಗೊಳಗಾಗಿದ್ದು ಭಾರೀ ಸುದ್ದಿಯಾಗಿದೆ.

Advertisement

ಕ್ರಿಕೆಟ್‌ ವಲಯದಲ್ಲಿ ಮತ್ತೆ ಜನಾಂಗೀಯ ನಿಂದನೆ ಪ್ರಕರಣ ಹೆಡೆ ಎತ್ತಿದೆ. ಹಿಂದೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌- ಆ್ಯಂಡ್ರೂ ಸೈಮಂಡ್ಸ್‌ ನಡುವಿನ “ಮಂಕಿ ಗೇಟ್‌ ಪ್ರಕರಣ’, ವರ್ಣಭೇದ ನೀತಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡ 21 ವರ್ಷ ಅಮಾನತ್ತುಗೊಂಡಿದ್ದು ಇಂತಹ ಅನೇಕ ಪ್ರಕರಣಗಳು ಕ್ರಿಕೆಟ್‌ನಲ್ಲಿ ಉದಾಹರಣೆಯಾಗಿ ಸಿಗುತ್ತವೆೆ. ಫ‌ುಟ್‌ಬಾಲ್‌ನಲ್ಲಂತೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಬೇಸ್‌ಬಾಲ್‌, ಬಾಸ್ಕೆಟ್‌ಬಾಲ್‌ ಕೂಟದಲ್ಲಿ ಹೆಚ್ಚಿನ ಪ್ರಕರಣಗಳು ಕ್ರೀಡಾ ಲೋಕದ ಮುಜುಗರಕ್ಕೆ ಕಾರಣವಾಗಿದೆ.

ಏನಿದು ಜನಾಂಗೀಯ ನಿಂದನೆ?: ಒಂದು ನಿರ್ದಿಷ್ಟ ಜನಾಂಗದ ಮೇಲೆ ಮಾಡುವ ಅವಹೇಳನವನ್ನು “ಜನಾಂಗೀಯ ನಿಂದನೆ’ ಎಂದು ಕರೆಯುತ್ತಾರೆ. ವ್ಯಕ್ತಿಯ ಧರ್ಮ, ಬಣ್ಣ, ಜಾತಿ, ದೇಶ, ಭಾಷೆ, ಸಂಸ್ಕೃತಿಯನ್ನು ಅವಹೇಳನ ಮಾಡುವುದು ಅಪರಾಧ. ಅದೆಲ್ಲವೂ ಜನಾಂಗೀಯ ನಿಂದನೆ ಎಂದು ಪರಿಗಣಿಸಲ್ಪಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next