Advertisement

Renukaswamy case: ʼದಾಸʼನನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಬಂದ ʼಬುಲ್‌ ಬುಲ್‌ʼ

05:05 PM Aug 22, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy case) ಜೈಲುಪಾಲಾಗಿರುವ ನಟ ದರ್ಶನ್‌(Darshan) ಅವರನ್ನು ಭೇಟಿ ಆಗಲು ಚಿತ್ರರಂಗದ ಅನೇಕರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿದ್ದಾರೆ.

Advertisement

ವಾರದಲ್ಲಿ ಎರಡು ಬಾರಿ ಮಾತ್ರ ಭೇಟಿಗೆ ಅವಕಾಶವಿರುವುದರಿಂದ ಗುರುವಾರ(ಆ.22ರಂದು) ದರ್ಶನ್‌ ಸಿನಿಮಾದ ನಾಯಕಿ,ಅಭಿಮಾನಿಗಳ ಮೆಚ್ಚಿನ ರಚ್ಚು(Rachita Ram)‌ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ.

ಭೇಟಿಗೂ ಮೊದಲು ಉತ್ತರಹಳ್ಳಿ ಕೆಂಗೇರಿ ರೋಡ್ ಬಳಿ ಇರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿದ್ದರು. ರಾಯರ ದರ್ಶನ ಪಡೆದು ಪೂಜೆ ಸಲ್ಲಿಸಿ, ಹಣ್ಣು ಹಂಪಲು ಹಾಗೂ ಮೂರು ಬ್ಯಾಗ್‌ ಗಳನ್ನು ಹಿಡಿದುಕೊಂಡು ದರ್ಶನ್‌ ಅವರನ್ನು ನೋಡಲು ಹೋಗಿದ್ದಾರೆ.

ರಚಿತಾ ರಾಮ್‌ ಜೊತೆ ಬಿಜೆಪಿ ಮುಖಂಡ ಸಚ್ಚಿದಾನಂದ ಕೂಡ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ.

ಎರಡು ತಿಂಗಳ ಬಳಿಕ ದರ್ಶನ್‌ ಅವರ ಭೇಟಿ ರಚಿತಾ ರಾಮ್‌ ತೆರಳಿದ್ದಾರೆ. ಈ ಹಿಂದೆ ರೇಣುಕಾಸ್ವಾಮಿ ಪ್ರಕರಣ ಕುರಿತು ತನ್ನ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ  “ನಮಸ್ಕಾರ ಈ ಹೇಳಿಕೆಯನ್ನು ನಾನು ನಟಿಯಾಗಿ ಅಲ್ಲ, ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತೀಚಿಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು! ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನನಗಿದೆ. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ಸರ್ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸರ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೆ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ” ಎಂದು ಬರೆದುಕೊಂಡಿದ್ದರು.

Advertisement

ಕಿರುತೆರೆಯಿಂದ ಸಿನಿಮಾರಂಗಕ್ಕೆ ಬಂದ ರಚಿತಾ ರಾಮ್‌ ದರ್ಶನ್‌ ಅವರೊಂದಿಗೆ ʼಬುಲ್ ಬುಲ್ʼ, ʼಅಂಬರೀಷ್ʼ, ʼಕ್ರಾಂತಿʼ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತ ಪ್ರಕರಣ ಸಂಬಂಧ ದರ್ಶನ್‌ ವಿರುದ್ಧ ಪೊಲೀಸರು 4000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next