Advertisement

ರಚಿತಾ ಸಿನಿಯಾನಕ್ಕೆ ಏಳು ವರ್ಷ

06:38 AM May 13, 2020 | Lakshmi GovindaRaj |

ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು 7 ವರ್ಷಗಳು ಕಳೆದಿದೆ. ಈ ಖುಷಿಯನ್ನು ತಾವು ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಬುಲ್‌ ಬುಲ್‌ ಚಿತ್ರದ ಪೋಸ್ಟರ್‌ ಶೇರ್‌ ಮಾಡುವ ಮೂಲಕ ರಚಿತಾ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು 7 ವರ್ಷ ತುಂಬಿದೆ. ನನ್ನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ತೂಗುದೀಪ ಪ್ರೊಡಕ್ಷನ್ಸ್‌ ಗೆ ಎಂದೂ ನಾನು ಚಿರಋಣಿ.

Advertisement

ಸಿನಿ ಬದುಕಿನಲ್ಲಿ ನನಗೆ ಪ್ರೊತ್ಸಾಹಿಸಿ  ಬೆಳೆಸಿದ ನನ್ನ ಹೆತ್ತವರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಎಂದು ರಚಿತಾ ಖುಷಿಯಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ಇನ್‌ ಸ್ಟಾಗ್ರಾಮ್‌ ನಲ್ಲಿ ಸುದೀರ್ಘ‌ವಾಗಿ ಬರೆದುಕೊಂಡಿರುವ  ರಚಿತಾ, ನನ್ನ ಈ ಕಲಾ ಬದುಕಿಗೆ 7 ವರ್ಷಗಳು ತುಂಬಿದೆ ಅಂದ್ರೇ ನಂಬಕ್ಕೇ ಆಗ್ತಿಲ್ಲ. ನನ್ನನ್ನ ಸಿನಿಮಾ ರಂಗಕ್ಕೆ ಪರಿಚಯ ಮಾಡಿಸಿದ ತೂಗುದೀಪ ಪ್ರೊಡಕ್ಷನ್ಸ್‌ ಗೆ ಸದಾ ಚಿರಋಣಿಯಾಗಿರ್ತೀನಿ.

ಬುಲ್‌ ಬುಲ್‌ನಿಂದ  ಬೆಳ್ಳಿತೆರೆಗೆ ಇಟ್ಟ ಹೆಜ್ಜೆ ಇಂದಿಗೂ ಮಾಸಿಲ್ಲ ಇದಕ್ಕೆ ಕಾರಣ ನನ್ನ ತಂದೆ ತಾಯಿಯ ನಂಬಿಕೆ, ದೇವರ ಅನುಗ್ರಹ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳ ಆಶೀರ್ವಾದ. ಈ ಪಯಣದಲ್ಲಿ ಕಲಿತ  ಪಾಠಗಳು, ಅರಿತ ಮನಸುಗಳು, ಪ್ರತಿಯೊಂದು ಸಿನಿಮಾದ ನೆನಪುಗಳು ನೆನೆಸಿಕೊಂಡ್ರೆ ಕಣ್ತುಂಬಿ ಬರುತ್ತೆ. ನನ್ನ ಸಿನಿ ಬದುಕಿನಲ್ಲಿ ನನಗೆ ಮಾರ್ಗದರ್ಶಿಗಳಾಗಿ ನಿಂತ ಪ್ರತಿಯೊಬ್ಬರಿಗೂ ತುಂಬು ಹೃದಯದ  ಕೃತಜ್ಞತೆಗಳನ್ನ ಸಲ್ಲಿಸ್ತೀನಿ.

ನಿಮ್ಮೆಲ್ಲರ ಪ್ರೀತಿ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ನಿಮ್ಮ ರಚಿತರಾಮ್‌ ಎಂದು ಬರೆದು ಬುಲ್‌ಬುಲ್‌ ಚಿತ್ರದ ಪೋಸ್ಟರ್‌ ಶೇರ್‌ ಮಾಡಿದ್ದಾರೆ. ಬುಲ್‌ ಬುಲ್‌ ಮೂಲಕ ಎಂಟ್ರಿಕೊಟ್ಟ ರಚಿತಾ ಆ ನಂತರ ಕನ್ನಡ  ಚಿತ್ರರಂಗದಲ್ಲಿ ಸ್ಟಾರ್‌ ನಟಿಯಾಗಿ ಮೆರೆದವರು. ಕನ್ನಡದ ಬಹುತೇಕ ಸ್ಟಾರ್‌ಗಳ ಚಿತ್ರಗಳಲ್ಲಿ ರಚಿತಾ ನಟಿಸಿದ್ದಾರೆ. ಸದ್ಯ ತೆಲುಗು ಚಿತ್ರ ವೊಂದರಲ್ಲಿ ರಚಿತಾ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next