Advertisement

Car-Truck ಢಿಕ್ಕಿ: ಕುಟುಂಬದ 7 ಮಂದಿ ಸುಟ್ಟು ಕರಕಲು

12:32 AM Apr 15, 2024 | Team Udayavani |

ಜೈಪುರ: ರಾಜಸ್ಥಾನದ ಸಿಕರ್‌ ಜಿಲ್ಲೆಯಲ್ಲಿ ಕಾರು ಮತ್ತು ಟ್ರಕ್‌ ಪರಸ್ಪರ ಢಿಕ್ಕಿ ಹೊಡೆದು ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಸುಟ್ಟು ಕರಕಲಾಗಿದ್ದಾರೆ. ಅವರೆಲ್ಲರೂ ಉತ್ತರ ಪ್ರದೇಶದ ಮೇರs…ಗೆ ಸೇರಿದವರಾಗಿದ್ದಾರೆ. ದೇಗುಲವೊಂದಕ್ಕೆ ತೆರಳುತ್ತಿದ್ದಾಗ ರವಿವಾರ ಈ ದುರಂತ ನಡೆದಿದೆ. ಕಾರಿನ ಚಾಲಕ ಟ್ರಕ್‌ ಅನ್ನು ಹಿಂದಿಕ್ಕುವ ರಭಸದಲ್ಲಿ ಅದಕ್ಕೆ ಗುದ್ದಿದ್ದಾನೆ. ಈ ಸಂದರ್ಭದಲ್ಲಿ ಕಾರ್‌ನಲ್ಲಿದ್ದ ಎಲ್‌ಪಿಜಿ ಕಿಟ್‌ ಸ್ಫೋಟಗೊಂಡು ಅದರಲ್ಲಿದ್ದವರೆಲ್ಲರೂ ಸುಟ್ಟು ಕರಕಲಾಗಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next