Advertisement
2021ರ ಕ್ಯಾಪಿಟೊಲ್ ಹಿಲ್ ದಂಗೆಗೆ ಟ್ರಂಪ್ ಕುಮ್ಮಕ್ಕು ನೀಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣೆ ಸ್ಪರ್ಧೆಯ ಮೊದಲ ಹಂತ ಪ್ರೈಮರಿಯಲ್ಲಿ ಭಾಗವಹಿಸದಂತೆ ಮೇನ್ ಪ್ರಾಂತ್ಯದ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಮೂಲಕ ಟ್ರಂಪ್ ಸ್ಪರ್ಧೆ ಕುರಿತಂತೆ ಅಮೆರಿಕದ ಸುಪ್ರೀಂಕೋರ್ಟ್ ನಿರ್ಧಾರ ಪ್ರಕಟಿಸುವ ಮುನ್ನವೇ ನಿರ್ಧಾರ ಕೈಗೊಂಡ ಮೊದಲ ರಾಜ್ಯ ಕಾರ್ಯಾಲಯವು ಇದಾಗಿದೆ.
Related Articles
ಮೇನ್ ಹಾಗೂ ಕೊಲರಾಡೋ ಪ್ರಾಂತ್ಯಗಳಲ್ಲಿ ನಿರ್ಬಂಧ ಬಿದ್ದಿರುವ ನಡುವೆಯೇ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಟ್ರಂಪ್‌ಗೆ ಸ್ಪರ್ಧಿಸಲು ಅನುವು ಮಾಡಿಕೊಡಲು ತೀರ್ಮಾನಿಸಿದೆ. ಈ ಕುರಿತಂತೆ ಪ್ರಾಂತ್ಯದ ಕಾರ್ಯದರ್ಶಿ ಡಾ. ಶೆರ್ಲಿ ವೆಬರ್ ಮಾತನಾಡಿ ಅಧ್ಯಕ್ಷೀಯ ಅಭ್ಯರ್ಥಿಗಳು ಸ್ಪರ್ಧಿಸಬೇಕೆ ? ಬೇಡವೇ ಎಂಬುದನ್ನು ನ್ಯಾಯಾಲಯಗಳು ಮಾತ್ರವೇ ತೀರ್ಮಾನಿಸಬಹುದು. ಎಂದಿದ್ದಾರೆ. 2 ದಿನಗಳ ಹಿಂದಷ್ಟೇ ಮಿಚಿಗನ್ ಸುಪ್ರೀಂಕೋರ್ಟ್ ಟ್ರಂಪ್ ಪರ ತೀರ್ಮಾನ ಕೈಗೊಂಡಿತ್ತು.
Advertisement