Advertisement

ಗುಂಡ್ಲುಪೇಟೆ: ಮೊಲ ಬೇಟೆ; ಇಬ್ಬರ ಬಂಧನ

07:46 PM Feb 22, 2022 | Team Udayavani |

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದಕೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡುಪ್ರಾಣಿ ಮೊಲ ಬೇಟೆಯಾಡಿ ಮಾಂಸದಡುಗೆ ತಯಾರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಅಣ್ಣೂರುಕೇರಿ ಗ್ರಾಮದ ಮಹೇಶ ಮತ್ತು ಕೋಡಹಳ್ಳಿಯ ಕುಮಾರ ಬಂಧಿತರು. ಫೆ.22 ಬೆಳಗಿನ ಜಾವ 3.30ರ ಸಮಯದಲ್ಲಿ ಕುಂದುಕರೆ ವಲಯದ ಕುಂದುಕರೆ ಶಾಖೆಯ, ಕಡಬೂರು ಬೀಟ್‍ನ ಕುರುಬರಹುಂಡಿ ಮಡಿವಾಳಪ್ಪನವರ ಜಮೀನಿನ ಹತ್ತಿರ ಇಬ್ಬರು ವ್ಯಕ್ತಿಗಳು ಕಾಡು ಪ್ರಾಣಿಯಾದ ಮೊಲ ಮಾಂಸವನ್ನು ಬೇಯಿಸುತ್ತಿದ್ದರು.

ಈ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ನನ್ನ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀನಿವಾಸನಾಯಕ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಬಂಧಿತ ಆರೋಪಿಗಳಿಂದ ದ್ವಿಚಕ್ರ ವಾಹನ, ನಾಡ ಬಂದೂಕು, ತಲೆ ಬ್ಯಾಟರಿ, ಬಿಳಿ ಬಣ್ಣದ ಪ್ಲಾಸ್ಟಿಕ್ ಬ್ಯಾಗ್, ಮಾಂಸ ಬೇಯಿಸಿದ ದೊಡ್ಡ ಪಾತ್ರೆ, ಅನ್ನ ಬೇಯಿಸಿದ ಚಿಕ್ಕ ಪಾತ್ರೆ-1 ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಜಿ.ಎಂ.ಎಫ್.ಸಿ. ನ್ಯಾಯಾಲಯ, ಗುಂಡ್ಲುಪೇಟೆ ರವರ ಮುಂದೆ ಹಾಜರುಪಡಿಸಲಾಗಿದೆ ಎಂದು ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next