Advertisement

ರಾ.ಹೆ. ಸುಗಮ, ಸುರಕ್ಷಿತ ಸಂಚಾರಕ್ಕೆ ಯೋಗ್ಯವಾಗಿರಲಿ: ಕೂರ್ಮಾ ರಾವ್‌

02:18 AM Sep 30, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಜನಸಾಮಾನ್ಯರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾ ಗುವ ರೀತಿಯಲ್ಲಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಗೊಳ್ಳಬೇಕು ಎಂದು ಜಿಲ್ಲಾಧಿ ಕಾರಿ ಎಂ. ಕೂರ್ಮಾ ರಾವ್‌ ತಿಳಿಸಿದರು.

Advertisement

ಅವರು ಬುಧವಾರ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ರಾ.ಹೆ. 66 ಮತ್ತು 169ಎ ಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾ.ಹೆ. 66ರ ಕುಂದಾಪುರದ ಸಂಗಂ ಬಳಿ ಮಳೆನೀರು ನಿಂತು ವಾಹನ ಸಂಚಾರಕ್ಕೆತೊಂದರೆಯಾಗುತ್ತಿದೆ. ನೀರು ಸರಾಗವಾಗಿ ಹರಿಯಲು ಸ್ಥಳೀಯರ ಹಾಗೂ ರಾ.ಹೆ. ಪ್ರಾಧಿಕಾರದವರು ಸಮನ್ವಯದೊಂದಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಕುಂದಾಪುರದ ಫ್ಲೈಓವರ್‌ ಹತ್ತಿರ ಬಾಕಿಉಳಿದಿರುವ ರಸ್ತೆಯ ಡಾಮರು, ಮಳೆ ನೀರುಸರಾಗವಾಗಿ ಹೋಗುವ ವ್ಯವಸ್ಥೆ, ಬೀದಿದೀಪ, ಸೂಚನಾ ಫ‌ಲಕ ಅಳವಡಿಕೆ, ಪಾದಚಾರಿ ದಾಟು ಇತ್ಯಾದಿ ಕಾಮಗಾರಿ ಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು ಪೂರ್ಣಗೊಳಿಸಬೇಕು ಎಂದರು.

ಇದನ್ನೂ ಓದಿ:ಶೀಘ್ರವೇ ಜಗನ್‌ ಸಂಪುಟ ಪುನಾರಾಚನೆ?

Advertisement

ಜಿಲ್ಲಾಡಳಿತದಿಂದ ಸರ್ವ ಸಹಕಾರ
ಹೆದ್ದಾರಿ ಕಾಮಗಾರಿಗಳಿಗೆ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಯಾವುದೇ ರೀತಿಯ ನೆರವು ಹಾಗೂ ಮತ್ತಿತರ ಸಮಸ್ಯೆಗಳಿದ್ದಲ್ಲಿ ಸಚಿವರ ಮೂಲಕ ಶೀಘ್ರದಲ್ಲಿಯೇ ಬಗೆಹರಿಸಿ ಕೊಡ ಲಾಗುತ್ತದೆ ಎಂದು ತಿಳಿಸಿದರು.

ಇಂದ್ರಾಳಿಯಲ್ಲಿ ತಾತ್ಕಾಲಿಕ ದುರಸ್ತಿ
ಇಂದ್ರಾಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅಲ್ಲಿ ತಾತ್ಕಾಲಿಕ ರಸ್ತೆ ದುರಸ್ತಿ ಕೈಗೊಳ್ಳ ಬೇಕು. ಜತೆಗೆ ಕರಾವಳಿ ಜಂಕ್ಷನ್‌ನಿಂದ ಮಲ್ಪೆ ಬಂದರಿನ ವರೆಗೆ ರಸ್ತೆ ಕಾಮಗಾರಿಯನ್ನು ಅಗತ್ಯವಿರುವ ಪೂರ್ವ ತಯಾರಿ ಮಾಡಿ ಕೊಳ್ಳಬೇಕು. ಹೆಬ್ರಿ-ಸೋಮೇಶ್ವರ ಒಳ ಗೊಂಡಂತೆ ಆಗುಂಬೆ ವರೆಗಿನ ರಸ್ತೆಯ ಡಾಮರು ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಕಾಮಗಾರಿ ಪ್ರಾರಂಭಿಸಬೇಕು ಎಂದರು.

ಎಸ್‌ಪಿ ವಿಷ್ಣುವರ್ಧನ್‌, ಉಪ ವಿಭಾಗಾಧಿಕಾರಿ ರಾಜು, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪರ್ಕಳ: ಕಾಮಗಾರಿ ಆರಂಭಕ್ಕೆ ಸೂಚನೆ
ಪರ್ಕಳದ ರಸ್ತೆ ವಿಸ್ತರಣೆ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಶೀಘ್ರ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳ ಬೇಕು, ಮಳೆಯ ಬಿರುಸು ತಗ್ಗಿದ್ದು ತಕರಾರು ಇಲ್ಲದ ಭಾಗದಲ್ಲಿ ತತ್‌ಕ್ಷಣ ಕಾಮಗಾರಿ ಪ್ರಾರಂಭಿಸಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next