Advertisement

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

01:07 PM Mar 24, 2024 | Team Udayavani |

ಕಲಬುರಗಿ: ಮತ್ತೊಮ್ಮೆ ಸೋಲುವ ಭಯದಿಂದ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ ಟೀಕಿಸಿದರು.

Advertisement

ಬೀದರ್ ಗೆ ತೆರಳಲು ವಿಮಾನ ಮೂಲಕ ಇಲ್ಲಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.‌

ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಮತ್ತೊಮ್ಮೆ ಗೆದ್ದೇ ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕಾಂಗ್ರೆಸ್ ನಲ್ಲಿ ಬರೀ ಕುಟುಂಬದವರಿಗೆ ಟಿಕೆಟ್ ನೀಡಿದ್ದಾರೆ. ಬೇರೆ ಪಕ್ಷದಲ್ಲೂ ಟಿಕೆಟ್ ನೀಡಲಾಗಿದೆ ಎನ್ನುತ್ತಾ ಟಿಕೆಟ್ ನೀಡಿದ್ದಾರೆ. ಆದರೆ ನಮ್ಮಲ್ಲಿ ಬೇರೆ ರೀತಿ ಟಿಕೆಟ್ ಕೊಟ್ಟಿದ್ದೇವೆ ಎಂದರು.‌

ಸಿದ್ದರಾಮಯ್ಯ ಅವರನ್ನು ಪವರ ಫುಲ್ ಸಿಎಂ ಅಂತಾರಲ್ಲ. ಹಾಗಿದ್ದರೆ ಬತ್ತಿ ಹೋಗಿರುವ ಭೀಮಾ‌ ನದಿಗೆ ನೀರು ಬಿಡಿಸಲಿ.‌ ಹೀಗಾಗಿ ಮಹಾರಾಷ್ಟ್ರ ಸಿಎಂ ಬಳಿ ಹೋಗಿ ಚರ್ಚೆ ಮಾಡಲಿ.‌ ಇವರ ಕೈಯಲ್ಲಿ ಆಗಲ್ಲವೆಂದು ಹೇಳಿದರೆ‌ ನಾವು ಮಾಡುತ್ತೇವೆ ಎಂದು ತಿರುಗೇಟು ನೀಡಿದ ಆರ್.‌ ಅಶೋಕ್,  ಪವರ್ ಫುಲ್ ಸಿಎಂ ವೀಕ್ ಮಾಡುತ್ತಿರುವವರು ಅವರ ಪಕ್ಷದವರೇ.‌ ಸಿಎಂ‌ ಕುರ್ಚಿ ಮೇಲೆ ಬಹಳಷ್ಟು ಜನ‌ ಕಣ್ಣಿಟ್ಟಿದ್ದಾರೆ.‌ ಲೋಕಸಭಾ ಚುನಾವಣೆ ನಂತರ ಸಿದ್ದು ಕೆಳಗಿಳಿಯುತ್ತಾರೆಂದು ಅವರ ಶಾಸಕರೇ ಹೇಳುತ್ತಿದ್ದಾರೆ ಎಂದರು.

ಬೀದರ್ ನಲ್ಲಿ ಕಾರ್ಯಕರ್ತರ ಭದ್ರ ಬುನಾದಿಯಿದೆ: ಪ್ರಧಾನಿ ಮೋದಿ ಅವರ ಹವಾದಲ್ಲಿ ಎಲ್ಲರೂ ಗೆಲ್ಲುತ್ತೆವೆಂಧು ನಮಲ್ಲಿ ಬಹಳಷ್ಟು ಜನ ಆರ್ಜಿ ಹಾಕಿದ್ದರು‌. ಕೊನೆಗೆ ಹೈಕಮಾಂಡ್ ಟಿಕೆಟ್ ಅಂತಿಮ ಮಾಡಿದೆ. ಬೀದರ್ ನಲ್ಲೂ ಹಾಲಿ ಸಂಸದರಿಗೆ ಟಿಕೆಟ್ ನೀಡಿದ್ದ ಕ್ಕೆ ಸಾಕಷ್ಟು ಅಸಮಾಧಾನ ಇರುವ ಹಿನ್ನೆಲೆಯಲ್ಲಿ ಬೀದರ್ ನ ಎಲ್ಲ ಶಾಸಕರ ಜೊತೆ ಒನ್-ಟು-ಒನ್ ಚರ್ಚೆ ಮಾಡಲಾಗಿ ಅಸಮಧಾನ ಬಗೆಹರಿಸಲಾಗುತ್ತಿದೆ. ಪ್ರಮುಖವಾಗಿ ಬೀದರ್ ನಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ ಎಂದು ಆರ್.‌ ಅಶೋಕ ಇದೇ ಸಂದರ್ಭದಲ್ಲಿ ಹೇಳಿದರು.

Advertisement

ಸುಮಲತಾ ಪಕ್ಷ ಸೇರಬೇಕಿತ್ತು: ಸುಮಲತಾ ಅವರಿಗೆ ಕಳೆದ ಭಾರಿ ಚುನಾವಣೆಯಲ್ಲಿ ನಾವೆಲ್ಲೂ ಸಪೋರ್ಟ್ ಮಾಡಿಲ್ಲ. ನಾನೇ ಮಂಡ್ಯ ಉಸ್ತುವಾರಿ ಇದ್ದೆ. ಅವರು ಗೆದ್ದ ಮೇಲೆ ಪಾರ್ಟಿ ಸೇರಬೇಕಿತ್ತು. ಬಿಜೆಪಿಗೆ ಸುಮಲತಾ ಅವರು ಸೇರಲಿಲ್ಲ. ಗೆದ್ದ ಆರು ತಿಂಗಳೊಳಗೆ ಪಕ್ಷ ಸೇರ್ಪಡೆ ಆಗಬೇಕಿತ್ತು. ಆದರೆ ಅವರು ಸೇರಲಿಲ್ಲ‌ ಆದರೂ ನಮ್ಮ ಕೇಂದ್ರ ನಾಯಕರು ಅವರ ಜೊತೆ ಮಾತನಾಡುತ್ತಿದ್ದಾರೆ‌. ಅವರ ಮನವೊಲಿಸುವ ಕೆಲಸ ಮಾಡಿದ್ದಾರೆ. ಅಷ್ಟಾದ ಮೇಲೂ ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದು ಅಶೋಕ್ ವಿವರಣೆ ನೀಡಿದರು.

ಬ್ರಹ್ಮ ಬಂದರೂ ನನ್ನ ಸ್ಪರ್ಧೆ ತಪ್ಪಿಸೋಕ್ಕಾಗಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬ್ರಹ್ಮ ಯಾವತ್ತು ಭೂಮಿಗೆ ಬರುವುದಿಲ್ಲ. ನಮ್ಮದು ಕಾರ್ಯಕರ್ತರ ಪಕ್ಷ. ಈಶ್ವರಪ್ಪನವರ ಬಂಡಾಯ ಶಮನವಾಗುತ್ತದೆ‌. ನಾಮಪತ್ರ ಸಲ್ಲಿಕೆ ವೇಳೆಗೆ ಎಲ್ಲವೂ ಶಮನವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರದಲ್ಲಿ ನಾವೇ ಗೆಲ್ಲುವುದು. ಕಾಂಗ್ರೆಸ್ ನವರು ಹೆದರಿ ಹೋಗಿದ್ದಾರೆ. ಬಿಜೆಪಿ-ಜೆಡಿಎಸ್ ಇಂತಹ ಪ್ರಯೋಗ ಮಾಡುತ್ತದೆಂದು ಯಾರು ಊಹಿಸಿರಲಿಲ್ಲ. ಡಾಕ್ಟರ್ (ಸಿ.ಎನ್.ಮಂಜುನಾಥ್) ಈ ಸಲ ಭಾರಿ ಅಂತರದಿಂದ ಗೆಲ್ಲುತ್ತಾರೆ ಎಂದರು.

ಬರ ಪರಿಹಾರಕ್ಕಾಗಿ ಕೇಂದ್ರ ವಿರುದ್ದ ಸುಪ್ರೀಂ ಮೊರೆ ಹೋಗಿರುವುದು ನಾಚೀಕೆಗೇಡಿನ ಸಂಗತಿ. ಪಕ್ಕದ ರೇವಂತ ರೆಡ್ಡಿ ನೋಡಿ ಕಲಿಯಬೇಕು‌. ರೇವಂತ ರೆಡ್ಡಿ ಅವರ ಕಾಂಗ್ರೆಸ್ ಪಕ್ಷದವರೇ‌. ಅವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಯಲಿ. ಸಿದ್ದರಾಮಯ್ಯ ಬರ ಪರಿಹಾರ ಬಗ್ಗೆ ನಮಗೆ ಕೇಳಲಿ. ಹಿಂದೆ ನೀವು ಯಾವ ರೀತಿ ಪರಿಹಾರ ಕೊಟ್ಟಿದ್ದೇವೆ‌. ಸಿದ್ದರಾಮಯ್ಯನವರಿಗೆ ಧಮ್ ಇದ್ದರೆ ನಮಗೆ ಕೇಳಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next