Advertisement

ಅನ್ ಲಾಕ್ ಬಗ್ಗೆ ಚರ್ಚಿಸಲಾಗಿದೆ, ಬಾರ್ ಅವಧಿ ವಿಸ್ತರಣೆ ಕುರಿತೂ ಚರ್ಚಿಸಲಾಗಿದೆ : ಆರ್ ಅಶೋಕ್

03:43 PM Jun 09, 2021 | Team Udayavani |

ಬೆಂಗಳೂರು : ಅನ್ ಲಾಕ್ ವಿಚಾರವನ್ನ ಚರ್ಚಿಸಲಾಗಿದೆ, ಏನು ಮಾಡಬೇಕು, ಹೇಗೆ ಮಾಡಬೇಕು, ಎಷ್ಟು ಹಂತಗಳಲ್ಲಿ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆದಿದೆ, ನಿನ್ನೆ ಸಿಎಂ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೇವೆ, ನಾನು, ಬಸವರಾಜ್ ಬೊಮ್ಮಾಯಿ ಹಾಗೂ ಸುಧಾಕರ್ ಸಿಎಂ ನಿವಾಸದಲ್ಲಿ ಚರ್ಚಿಸಿದೆವು ಎಂದು ವಿಧಾನಸೌಧದಲ್ಲಿ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

Advertisement

ಪಾರ್ಕ್, ಬಾರ್ ಗಳ ಸಮಯ ವಿಸ್ತರಣೆ ಸೇರಿದಂತೆ ಹಲ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಪಾರ್ಕ್ ಗಳನ್ನ ಬೆಳಗ್ಗೆ 5-8 ಗಂಟೆಯವರೆಗೆ ತೆರೆಯುವಂತೆ ಸಲಹೆ ನೀಡಿದ್ದೇವೆ. ಬಾರ್ ಗಳ ಅವಧಿ ವಿಸ್ತರಣೆ ಕುರಿತೂ ಚರ್ಚಿಸಲಾಗಿದೆ. ಹಂತ ಹಂತವಾಗಿ ಅನ್ ಲಾಕ್‌ ಮಾಡಲಾಗುವುದು. ನಾಳೆ ಈ ಬಗ್ಗೆ ಅಂತಿಮವಾಗಿ ಸಿಎಂ ಸಭೆ ನಡೆಸಲಿದ್ದಾರೆ. ಆ ನಂತರ ಅನ್ ಲಾಕ್ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.

ತೌಟೆ ಚಂಡಮಾರುತದಿಂದ ಸಾಕಷ್ಟು ಹಾನಿಯಾಗಿದೆ. 209 ಕೋಟಿ ನಷ್ಟವಾಗಿದೆ. ನಷ್ಟ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಇದು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸರ್ಕಾರವಲ್ಲ. ಇದು ನರೇಂದ್ರ ಮೋದಿ ಸರ್ಕಾರ ಹಾಗಾಗಿ ಇದರ ಎಲ್ಲಾ ಕ್ರೆಡಿಟ್ ಮೋದಿಯವರಿಗೇ ಸೇರಬೇಕು.

ಲಸಿಕೆಗೆ ಕಾಂಗ್ರೆಸ್ ನೂರು ಕೋಟಿ ಕೊಡುವ ವಿಚಾರವಾಗಿ ಮಾತನಾಡಿದ ಅವರು, ಕೈ ನಾಯಕರ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ತನ್ನ ಫಂಡ್ ನಲ್ಲಿ ಎಷ್ಟೇ ಕೊಟ್ಟರೂ ತೆಗೆದುಕೊಳ್ತೇವೆ. ಆದರೆ ಇದು ಕಾಂಗ್ರೆಸ್ ಫಂಡ್ ಅಲ್ಲ
ಅಷ್ಟು ಹಣ ಅವರ ಪಕ್ಷದ ಕಚೇರಿಯಲ್ಲೇ ಇಲ್ಲ ಅನ್ಸುತ್ತೆ. ಇದು ಸರ್ಕಾರದ ಫಂಡ್ ಹಣವನ್ನ ಹೇಗೆ ಖರ್ಚು ಮಾಡಬೇಕು ಎಂದು ತೀರ್ಮಾನ ಮಾಡೋದು ಸರ್ಕಾರ. ಕಾಂಗ್ರೆಸ್ ಪಕ್ಷಕ್ಕೆ ಆ ಜವಬ್ದಾರಿ ಕೊಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಹಣವನ್ನು ಕೊಡ್ತೇವೆ ಎಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ ಎಂದರು.

ಅಧಿಕಾರಿಗಳ ಜೊತೆಗೆ ಬೆಡ್ ವಿಚಾರಕ್ಕೆ ಸಭೆ ನಡೆಸಲಾಗಿದೆ. ಖಾಸಗಿ ಆಸ್ಪತ್ರೆ ಮೆಡಿಕಲ್ ಕಾಲೇಜ್‌ನಲ್ಲಿ 6603 ಜನರಲ್ ಬೆಡ್ ಗಳು
ಹೆಚ್‌ ಡಿಯು 4078 ಐಸಿಯು 470 ಸೇರಿ 11574 ಬೆಡ್ ಗಳನ್ನು ನಮಗೆ ನೀಡಿದ್ರು. ಕಳೆದ‌ ಒಂದು ವಾರದಿಂದ ಕೋವಿಡ್ ಪಾಸಿಟಿವ್ 2000 ಆಸುಪಾಸಿನಲ್ಲೇ ಇದೆ. ಈಗ ಅಡ್ಮಿಷನ್ ಆಗ್ತಿರೋದು 200 ಬೆಡ್ ಮಾತ್ರ ಆಗ್ತಿದೆ. 210 ಜನ ಮಾತ್ರ ನಿನ್ನೆ ಅಡ್ಮಿಷನ್ ಆಗ್ತಿದಾರೆ. ಒಟ್ಟಾರೆ ಜನರಲ್ ಬೆಡ್ 6603 ಬೆಡ್ ಗಳ ಪೈಕಿ 539 ಮಾತ್ರ ಅಡ್ಮಿಷನ್ ಇದೆ 6064 ಬೆಡ್ ಖಾಲಿ ಇದೆ. ಹೀಗಾಗಿ ಬೇರೆ ಖಾಯಿಲೆಗಳು ನಾನ್ ಕೋವಿಡ್ ಗೆ ಬೆಡ್ ಕೊರತೆ ಆಗಿರುವುದು ಗಮನಕ್ಕೆ ಬಂದಿದೆ. ಬೇರೆ ಬೇರೆ ಖಾಯಿಲೆಯವರಿಗೆ ತೊಂದರೆ ಆಗಬಾರದು. ಹಾಗಾಗಿ 5289 ಬೆಡ್ ಸರ್ಕಾರದ ಕೋಟಾದಿಂದ ರಿಲೀಸ್ ಮಾಡ್ತಿದ್ದೇವೆ. 20% ಬೆಡ್ ಗಳನ್ನು ಖಾಸಗಿ ಯವರಿಂದ ಉಳಿಸಿಕೊಳ್ತೀವಿ. ಉಳಿದಿದ್ದು ರಿಲೀಸ್ ಮಾಡ್ತೀವಿ ಎಂದು ಅಶೋಕ್ ಹೇಳಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next