Advertisement

ನಾವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಪಕ್ಷ ನಮ್ಮನ್ನು ಗುರುತಿಸುತ್ತದೆ : ಸಚಿವ ಅಶೋಕ್

09:05 PM Jul 19, 2021 | Team Udayavani |

ಬೆಂಗಳೂರು : ಒಕ್ಕಲಿಕ ಅಭಿವೃದ್ಧಿ ನಿಗಮಕ್ಕೆ ನೂತನವಾಗಿ ನೇಮಕಗೊಂಡ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂಕೃಷ್ಣಪ್ಪ ಅವರನ್ನು ಕಂದಾಯ ಸಚಿವ ಆರ್ ಅಶೋಕ ಅಭಿನಂದಿಸಿದರು. ಇಂದು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಅವರನ್ನ ಭವ್ಯವಾಗಿ ಸ್ವಾಗತಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ,”ಒಕ್ಕಲಿಗ ಸಮುದಾಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆಂದೆ ಈಗಗಾಲೇ ಬಜೆಟ್ ನಲ್ಲಿ ರೂ.500 ಕೋಟಿ ಮೀಸಲಿರಿಸಲಾಗಿದೆ. ಈ ನಿಗಮದ ಮೊದಲ ಅಧ್ಯಕ್ಷರಾಗಿ ಕೃಷ್ಣಪ್ಪ ಅವರು ಆಯ್ಕೆಯಾಗಿರುವುದು ಸುಯೋಗ ಎಂದೇ ಭಾವಿಸುತ್ತೇನೆ” ಎಂದು ಹೇಳಿದರು.

ಹಾಗೆಯೇ ಈ ವೇಳೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಮಾತುಗಳನ್ನಾಡಿದ ಸಚಿವರು ತಮ್ಮ ರಾಜಕೀಯದಲ್ಲಿ ತಾವು ಬೆಳೆದು ಬಂದ ಹಾದಿಯನ್ನ ವಿವರಿಸಿದರು. “ನಾವು ಪ್ರಾಮಾಣಿಕವಾಗಿ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿದೆರೆ ಪಕ್ಷ ನಮ್ಮನ್ನ ಖಂಡಿತಾ ಗುರುತಿಸಿ ಅತ್ಯುತ್ತಮ ಸ್ಥಾನ ಮಾನ ನೀಡುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ. ಪ್ರತಿಯೊಬ್ಬರು ವೈಯಕ್ತಿಕ ಅಸಮಧಾನಗಳನ್ನ ಮರೆತು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಪಕ್ಷದ ಬಲವರ್ಧನೆ ಸಾಧ್ಯ. ನಿಮ್ಮೆಲ್ಲರ ಬೆಂಬಲದಿಂದಾಗಿಯೇ ಪದ್ಮನಾಭನಗರ ಕ್ಷೇತ್ರದಲ್ಲಿ ಇಲ್ಲಿಯವರೆಗೂ 25000ಕ್ಕೂ ಅಧಿಕ ಆಹಾರ ಕಿಟ್ ಗಳನ್ನ ವಿತರಿಸಲಾಗಿದೆ.

ಇದನ್ನೂ ಓದಿ :2025ರ ವೇಳೆಗೆ ಮಾರುತಿ-ಸುಝುಕಿ ಸಂಸ್ಥೆಯಿಂದ ವಿದ್ಯುತ್‌ ಚಾಲಿತ ಕಾರು ಮಾರುಕಟ್ಟೆಗೆ !

Advertisement

ಎಲ್ಲಾ ಸಮುದಾಯದ ಜನರಿಗೂ ಆಹಾರ ಕಿಟ್ ಗಳನ್ನ ವಿತರಿಸಲಾಗಿದೆ. ಹಾಗೆಯೇ ಎಲ್ಲಾ ವರ್ಗದ ಜನರಿಗೂ ವಿತರಿಸಲಾಗಿದೆ. ಎಲ್ಲರಿಗೂ ನೀಡಬೇಕೆಂಬ ಆಶಯ ಹೊಂದಿದ್ದು, ಕೋವಿಡ್ ವೇಳೆ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಶಾಲಾ ಶಿಕ್ಷಕರಿಗೂ ಆಹಾರ ಕಿಟ್ ನೀಡುವ ಯೋಚನೆ ಹೊಂದಲಾಗಿದೆ. ಪದ್ಮನಾಭನಗರವು ಪಕ್ಷ ಸಂಘಟನೆಯಲ್ಲಿ ಮಾದರಿ ಕ್ಷೇತ್ರವಾಗಿದೆ”, ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next