ದುಬೈ: ಕ್ರಿಕೆಟ್ ಪಂದ್ಯದ ವೇಳೆ ಮಂಡಿಯೂರಲು ನಿರಾಕರಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ತಮ್ಮ ಸಹ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ವರ್ಣಭೇದ ನೀತಿಯ ವಿರುದ್ಧದ ಮಂಡಿಯೂರುವ ಅಭಿಯಾನವನ್ನು ಎಲ್ಲರೂ ಪಾಲಿಸಲೇಬೇಕು ಎಂಬ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಸೂಚನೆಯನ್ನು ಪಾಲಿಸದ ಕಾರಣ ವಿಕೆಟ್ ಕೀಪರ್ ಬ್ಯಾಟ್ಸಮನ್ ಡಿ ಕಾಕ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ಅಲಭ್ಯರಾಗಿದ್ದರು.
ಕ್ರಿಕೆಟ್ ದಕ್ಷಿಣ ಆಫ್ರಿಕಾದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ ಹೇಳಿಕೆಯಲ್ಲಿ, ಡಿ ಕಾಕ್ ಅವರು “ನೋವು, ಗೊಂದಲ ಮತ್ತು ಕೋಪ” ವನ್ನು ಕ್ಷಮಿಸಿ ಎಂದು ಹೇಳಿದ್ದಾರೆ. ಈ ನಡೆಯಿಂದ ಸಮಾಜಕ್ಕೆ ಒಳ್ಳೆಯದಾಗುವುದಾದರೆ ತಾನು ಮಂಡಿಯೂರಲು ಸಿದ್ದ ಎಂದಿದ್ದಾರೆ.
ಇದನ್ನೂ ಓದಿ:ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ
Related Articles
“ನನ್ನ ಸಹ ಆಟಗಾರರಿಗೆ ಮತ್ತು ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ನಾನು ಮಂಡಿಯೂರುವುದರಿಂದ ಇತರರಿಗೆ ಶಿಕ್ಷಣ ನೀಡಲು ಸಹಾಯ ಮಾಡುತ್ತದೆ ಮತ್ತು ಇತರರ ಜೀವನವನ್ನು ಉತ್ತಮಗೊಳಿಸಿದರೆ, ಹಾಗೆ ಮಾಡಲು ನಾನು ಹೆಚ್ಚು ಸಂತೋಷಪಡುತ್ತೇನೆ” ಎಂದು ಡಿ ಕಾಕ್ ಹೇಳಿದ್ದಾರೆ.
“ನನ್ನನ್ನು ‘ಜನಾಂಗೀಯವಾದಿ’ ಎಂದು ಕರೆಯುವುದು ನನಗೆ ತುಂಬಾ ನೋವುಂಟು ಮಾಡುತ್ತದೆ. ಇದು ನನ್ನ ಕುಟುಂಬವನ್ನು ನೋಯಿಸುತ್ತದೆ. ಇದು ನನ್ನ ಗರ್ಭಿಣಿ ಹೆಂಡತಿಗೆ ನೋವುಂಟು ಮಾಡುತ್ತದೆ. ನಾನು ಜನಾಂಗೀಯವಾದಿ ಅಲ್ಲ. ನನಗೆ ಮತ್ತು ನನ್ನನ್ನು ತಿಳಿದಿರುವವರಿಗೆ ಅದು ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ” ಎಂದು ಕ್ವಿಂಟನ್ ಡಿ ಕಾಕ್ ಹೇಳಿದ್ದಾರೆ.
ವಿಕೆಟ್ ಕೀಪರ್ ಬ್ಯಾಟ್ಸಮನ್ ಕ್ವಿಂಟನ್ ಡಿ ಕಾಕ್ ಅವರು ಮುಂದಿನ ಪಂದ್ಯಗಳಿಗೆ ಲಭ್ಯರಾಗಿದ್ದಾರೆ.