Advertisement
1ಕ್ವಿಲ್ಲಿಂಗ್ ನೆಕ್ಲೇಸುಗಳು: ಕ್ವಿಲ್ಲಿಂಗ್ ಸ್ಟ್ರಿಪ್ಪುಗಳು ವಿವಿಧ ಅಳತೆಗಳ ಥಿಕೆ°ಸ್ ಅನ್ನು ಹೊಂದಿರುತ್ತವೆ. ಅವುಗಳನ್ನು ನೀಡಲ್ಲುಗಳ ಸಹಾಯದಿಂದ ರೋಲ… ಮಾಡಿ ಬೇಕಾದ ಆಕಾರಕ್ಕೆ ತಂದು ಬಗೆ ಬಗೆಯ ಮಣಿಗಳನ್ನು, ಹೂವಿನ ಎಸಳಿನಂತಹ ಆಕಾರಗಳನ್ನು, ಇತ್ಯಾದಿ ಆಕಾರಗಳನ್ನು ಮಾಡಿಕೊಂಡು ಅವುಗಳನ್ನು ಥೆಡ್‌ಗಳ ಸಹಾಯದಿಂದ ಪೋಣಿಸಿ ನೆಕ್ಲೇಸುಗಳನ್ನು ತಯಾರಿಸಲಾಗಿರುತ್ತದೆ. ವಿವಿಧ ಬಗೆಯ ಬೀಡುಗಳನ್ನೂ ಕೂಡ ಮಧ್ಯದಲ್ಲಿ ಬಳಸಿ ಈ ಬಗೆಯ ನೆಕ್ ಪೀಸುಗಳನ್ನು ತಯಾರಿಸಬಹುದಾಗಿದೆ. ಬೇಕಾದ ಆಕಾರಗಳ ಬೀಡುಗಳು ಮತ್ತು ಆಕಾರಗಳನ್ನು ಮಾಡಲು ಸಾಧ್ಯವಿರುವುದರಿಂದ ವಿವಿಧ ಬಗೆಗಳಲ್ಲಿ ನೆಕ್ಲೇಸುಗಳು ದೊರೆಯುತ್ತವೆ. ಸೀರೆಗಳೊಂದಿಗೆ ಅಥವಾ ಮಕ್ಕಳಿಗಾದರೆ ಟ್ರೆಡಿಶನಲ… ದಿರಿಸುಗಳೊಂದಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ.2ಸರಳ ಕ್ವಿಲ್ಲಿಂಗ್ ಕಿವಿಯಾಭರಣಗಳು: ಕ್ವಿಲ್ಲಿಂಗನ್ನು ಸರಳ ಆಕಾರಗಳಲ್ಲಿ ರೋಲ್ ಮಾಡಿಕೊಂಡು ಸುಂದರವಾದ ಹ್ಯಾಂಗಿಂಗುಗಳನ್ನು ತಯಾರಿಸಬಹುದಾಗಿದೆ. ನೋಡಲು ಸುಂದರವೂ ಸರಳವೂ ಮತ್ತು ಹಗುರವೂ ಆಗಿರುವ ಇವುಗಳು ದಿನನಿತ್ಯದ ಬಳಕೆಗೆ ಹೇಳಿಮಾಡಿಸಿದಂತಿರುತ್ತವೆ. ಇವುಗಳಲ್ಲಿ ಜ್ಯಾಮಿತೀಯ ಆಕೃತಿಗಳಾದ ತ್ರಿಕೋನ, ಚೌಕ ಆಕೃತಿಗಳುಳ್ಳ ಕಿವಿಯಾಭರಣಗಳು ದೊರೆಯುತ್ತವೆ. ಮಕ್ಕಳು ಮತ್ತು ಮಹಿಳೆಯರು ಎಲ್ಲರಿಗೂ ಹೊಂದುವಂತಿರುತ್ತವೆ.
Related Articles
Advertisement
6ಫ್ಲೋರಲ್ ಸ್ಟಡ್ಡುಗಳು: ಬಂಗಾರದ ಸ್ಟಡ್ಡುಗಳನ್ನೂ ನಾಚಿಸುವಂತಹ ಕ್ವಿಲ್ಲಿಂಗ್ ಸ್ಟಡ್ಡುಗಳು ದೊರೆಯುತ್ತವೆ. ಹಾಗೂ ಧರಿಸಿದಾಗ ಬಹಳ ಸುಂದರವಾದ ಲುಕ್ಕನ್ನು ನೀಡುತ್ತವೆ. ಬಹಳ ಹಗುರ ಮತ್ತು ಕಲರ್‌ಫುಲ್ ಆಗಿರುವುದರಿಂದ ದಿರಿಸಿಗೆ ಮ್ಯಾಚಿಂಗ್ ಆಗಿ ಧರಿಸಬಹುದಾಗಿದೆ. ಎಲ್ಲಾ ಬಗೆಯ ಬಟ್ಟೆಗಳಿಗೂ ಒಪ್ಪುವಂತಹ ಸ್ಟಡ್ಡುಗಳು ದೊರೆಯುವುದರಿಂದ ಒಮ್ಮೆ ಪ್ರಯೋಗಿಸಲೇಬೇಕಾದ ಟ್ರೆಂಡು ಇವಾಗಿದೆ.
7ಝುಮ್ಕಾಗಳು: ಸಿಲ್ಕ… ಥೆಡ್ ಝುಮ್ಕಾಗಳಂತೆ ಕ್ವಿಲ್ಲಿಂಗ್ ಝುಮ್ಕಾಗಳು ಹಗುರವಾಗಿರುವುದರಿಂದ ದೊಡ್ಡ ಗಾತ್ರದ ಝುಮ್ಕಾಗಳನ್ನೂ ಕೂಡ ಸುಲಭವಾಗಿ ಧರಿಸಬಹುದಾಗಿದೆ. ಕ್ವಿಲ್ಲಿಂಗ್ ಸ್ಟಿಪ್ ಅನ್ನು ರೋಲ… ಮಾಡಿ ಝುಮ್ಕಾ ಮೌಲ್ಡ…ನಲ್ಲಿ ಪ್ರಸ್Õ ಮಾಡಿ ಝುಮ್ಕಾ ಆಕಾರವನ್ನು ನೀಡಲಾಗುತ್ತದೆ. ನಂತರ ಇವುಗಳನ್ನು ವಿವಿಧ ಬಗೆಯ ಸ್ಟೋನುಗಳಿಂದ ಅಲಂಕಾರಗೊಳಿಸಬಹುದು.8ಟ್ರೆಂಡಿ ಕ್ವಿಲ್ಲಿಂಗ್ ಬ್ರೇಸ್ಲೆಟ್ಸ…: ಮೆಟಲ್ ಬ್ರೇಸ್ಲೆಟ್, ಬೀಸ್ಟ್ ಬ್ರೇಸ್ಲೆಟ್ ಹೀಗೆ ಅನೇಕ ಬಗೆಯ ಬ್ರೇಸ್ಲೆಟ್ಟುಗಳನ್ನು ನೋಡಿರುತ್ತೇವೆ. ಅವುಗಳಂತೆಯೇ ಕ್ವಿಲ್ಲಿಂಗ್ ಬೀಡುಗಳು ಮತ್ತು ಲೂಪುಗಳನ್ನು ಬಳಸಿ ಅಂದವಾದ ಬ್ರೇಸ್ಲೆಟ್ಟುಗಳನ್ನು ತಯಾರಿಸಬಹುದಾಗಿದೆ. ಕ್ವಿಲ್ಲಿಂಗ್ ಬ್ರೇಸ್ಲೆಟ್ಟುಗಳು ಸ್ವಲ್ಪ ಡೆಲಿಕೇಟ… ಆಗಿರುವುದರಿಂದ ಬಳಸುವಾಗ ಸ್ವಲ್ಪ ಎಚ್ಚರಿಕೆಯ ಆವಶ್ಯಕತೆಯಿರುತ್ತದೆ. ಆದರೆ ಬಹಳ ಟ್ರೆಂಡಿ ಲುಕನ್ನು ಕೊಡುತ್ತವೆ. 9ಝುಮ್ಕಾ ಯಿಯರಿಂಗುಗಳು: ಝುಮ್ಕಾಗಳು ದೊಡ್ಡ ಗಾತ್ರದ ರಿಂಗಿನೊಂದಿಗೆ ಜೋಡಿಸಲ್ಪಟ್ಟಿರುತ್ತದೆ. ಇವುಗಳು ಫ್ಯೂಷನ್‌ವೇರುಗಳಾದ ಗಾಗ್ರ ಅಥವಾ ಲೆಹೆಂಗಾಗಳೊಂದಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ. ಸ್ಟೈಲಿಶ್ ಲುಕ್ಕನ್ನು ಕೊಡುವ ಇವುಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ. ಸಿಂಗಲ… ಬಣ್ಣದ ಝುಮ್ಕಾಗಳು ಮತ್ತು ಮಲ್ಟಿ ಕಲರ್ಡ್ ಝುಮ್ಕಾಗಳು ಕೂಡ ದೊರೆಯುತ್ತವೆ.
10ಮಕ್ಕಳಿಗಾಗಿ ಕ್ವಿಲ್ಲಿಂಗ್ ರಾಖೀಗಳು ಮತ್ತು ಫ್ರೆಂಡಿಪ್ ಬ್ಯಾಂಡುಗಳು: ಬ್ರೇಸ್ಲೆಟ್ಗಳ ಮಾದರಿಯಲ್ಲಿಯೇ ಕ್ವಿಲ್ಲಿಂಗ್ ಪೆಂಡೆಂಟುಗಳನ್ನು ಬಳಸಿ ರಾಖೀಗಳು ಮತ್ತು ಫ್ರೆಂಡಿಪ್ ಬ್ಯಾಂಡುಗಳನ್ನು ತಯಾರಿಸಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ದೊರೆಯುವ ಅಥವ ತಯಾರಾಗುವ ಇವುಗಳು ಸುಂದರವಾಗಿರುತ್ತವೆ. ಪ್ರಭಾ ಭಟ್