Advertisement

ಸದ್ದಿಲ್ಲದೇ ತಯಾರಾದ ವೇಷಧಾರಿ

11:55 AM Aug 16, 2018 | |

ಕೆಲವು ಸಿನಿಮಾಗಳು ಯಾವತ್ತೂ ಆರಂಭವಾಗುತ್ತವೆ, ಯಾವಾಗ ಮುಗಿಯುತ್ತವೆ ಎಂಬುದೇ ಗೊತ್ತಾಗುವುದಿಲ್ಲ. ಆ ಮಟ್ಟಿಗೆ ಸದ್ದಿಲ್ಲದೇ ಸಿನಿಮಾ ಮಾಡಿ ಮುಗಿಸುತ್ತಾರೆ. “ವೇಷಧಾರಿ’ ಕೂಡಾ ಅದೇ ಸಾಲಿಗೆ ಸೇರುವ ಸಿನಿಮಾ. ಈ ಚಿತ್ರ ಕೂಡಾ ಸದ್ದುಗದ್ದಲವಿಲ್ಲದೇ ಚಿತ್ರೀಕರಣ ಮುಗಿಸಿದೆ. ಶಿವಾನಂದ ಭೂಷಿ ಅವರ “ವೇಷಧಾರಿ’ ಕಾದಂಬರಿಯನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಚಿತ್ರವನ್ನು ವಿಕ್ರಮಾದಿತ್ಯ ಬಿ ಭೂಶಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. 

Advertisement

ಪ್ರತಿಯೊಬ್ಬ ವ್ಯಕ್ತಿಯು ಆಸೆಗಳ ಬೆನ್ನುಬಿದ್ದು ಅವುಗಳನ್ನು ಒಲಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅವು ಒಲಿಯುವುದು ಬಹಳ ಕಷ್ಟ. ಆದರೆ ಆಸೆಗಳನ್ನು ತೊರೆದು ನಮ್ಮಷ್ಟಕ್ಕೆ ನಾವು ನಿಯತ್ತಿನಿಂದ ಕಾಯಕ ಮಾಡಿದರೆ ಎಲ್ಲವೂ ನಮ್ಮ ಬೆನ್ನ ಹಿಂದೆಯೇ ಬರುತ್ತದೆ ಎನ್ನುವ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಆರ್ಯನ್‌ ನಾಯಕ ನಟನಾಗಿರುವ ಈ ಚಿತ್ರದಲ್ಲಿ ಶೃತಿ, ಸೋನಂ ರೈ, ಅಶ್ವಿ‌ತಾ ನಾಯಕಿಯರು.

ಬಿರಾದಾರ್‌, ಮಿಮಿಕ್ರಿ ಗೋಪಿ, ಕುರಿ ರಂಗಣ್ಣ, ಮೈಕಲ್‌ ಮಧು, ಮೋಹನ್‌ ಜುನೇಜ ಮತ್ತು ಸೀರುಂಡೆ ರಘು ಲಿಂಗ, ಜೀವನ್‌, ರಕ್ಷಕ್‌ ಈ ಚಿತ್ರದ ತಾರಾಗಣದಲ್ಲಿದ್ದಾರೆ.  ಚಿತ್ರದ ಆರು ಹಾಡುಗಳಿಗೆ ವಿ. ಮನೋಹರ್‌ ಸಂಗೀತ ನೀಡಿದ್ದಾರೆ. ಅತಿಶಯ್‌ ಜೈನ್‌ ಹಿನ್ನೆಲೆ ಸಂಗೀತ, ಚಂದ್ರು ಬೆಳವಂಗಲ ಛಾಯಾಗ್ರಹಣವಿರುವ ಈ ಚಿತ್ರವನ್ನು ಅನೀಲ ಹೆಚ್‌. ಅಂಬಿ, ಮತ್ತು ಹೆಚ್‌.ಕೆ. ಫ್ರೆಂಡ್ಸ್‌ ನಿರ್ಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next