Advertisement
ಶನಿವಾರ ಸುಳ್ಯ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿದ ವೇಳೆ ರಸ್ತೆ ಕಾಮಗಾರಿ ಆರಂಭಗೊಳ್ಳದ ಕುರಿತು ಅಜ್ಜಾವರ- ಮಂಡೆಕೋಲು ಗ್ರಾಮದ ರಸ್ತೆ ಅನುಷ್ಠಾನ ಸಮಿತಿಯವರು ಗಮನಸೆಳೆದರು. ಈ ಸಂದರ್ಭ ದೂರವಾಣಿ ಮೂಲಕ ಸಂಪರ್ಕಿಸಿ ಸಚಿವರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್ ಅವರನ್ನು ತಾಂತ್ರಿಕ ಮಂಜೂರಾತಿ ದೊರಕಿದ್ದರೂ ಶೀಘ್ರ ಟೆಂಡರ್ ಮುಖಾಂತರ ತುರ್ತಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದರು. ಈ ಸಂದರ್ಭ ಶಾಸಕ ಅಂಗಾರ ಹಾಗೂ ಜಿ.ಪಂ. ಮತ್ತು ತಾ.ಪಂ. ಜನಪ್ರತಿನಿಧಿಗಳು ಮತ್ತು ಪಕ್ಷ ಪ್ರಮುಖರು ಉಪಸ್ಥಿತರಿದ್ದರು.
ಸಂಬಂಧಿತ ಅಧಿಕಾರಿಯೊಂದಿಗೆ ಸಚಿವ ಡಿ.ವಿ. ಸದಾನಂದ ಗೌಡರು, ತನ್ನೂರಿನ ಈ ಕುಗ್ರಾಮ ಅಭಿವೃದ್ಧಿಯ ತೊಡಕಿನ ಬಗ್ಗೆ ಪ್ರಶ್ನಿಸಿದರಲ್ಲದೇ, ಹಿಂದೆ ಉದಯವಾಣಿ ಪತ್ರಿಕೆ ಮಂಡೆಕೋಲು ಗ್ರಾಮವನ್ನು ಕುಗ್ರಾಮವನ್ನಾಗಿ ಗುರುತಿಸಿತ್ತು ಎಂದು ಪ್ರಸ್ತಾಪಿಸಿ, ತುರ್ತು ಅವಶ್ಯವಿರುವ ಗ್ರಾಮದ ರಸ್ತೆ ಅಭಿವೃದ್ಧಿಯ ಬೇಡಿಕೆಯನ್ನು ತುರ್ತಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದರು.