ರಾಯಚೂರು: ಕೋವಿಡ್-19 ಮೂರನೇ ಅಲೆ ದೇಶದಲ್ಲಿ ಕ್ಷಿಪ್ರವಾಗಿ ಹರಡುತ್ತಿದ್ದು, ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಶೀಘ್ರವೇ ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಒಳಪಡಿಸುವಂತೆ ಅಪರ ಜಿಲ್ಲಾ ಧಿಕಾರಿ ದುರುಗೇಶ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಆರೋಗ್ಯ ಇಲಾಖೆ ಸಭೆಯಲ್ಲಿ ಮಾತನಾಡಿ, ಕೋವಿಡ್-19 ದೃಢಪಟ್ಟ ಪ್ರಕರಣಗಳ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪಕಿತರನ್ನು ಪತ್ತೆ ಹಚ್ಚುವ ಕಾಂಟೆಕ್ಟ್ ಟ್ರೇಸಿಂಗ್ ಮತ್ತು ಕ್ವಾರಂಟೈನ್ ವಾಚ್ ತಂಡ ರಚನೆ ಮಾಡಿದ್ದು, ತಂಡದ ಅಧಿ ಕಾರಿಗಳಿಗೆ ಇಲಾಖೆ ಸಿದ್ಧಪಡಿಸಿದ ಅಪ್ಲಿಕೇಶನ್ ಕುರಿತು ತರಬೇತಿಯಲ್ಲಿ ಮಾತನಾಡಿದರು.
ಕೊರೊನಾ 3ನೇ ಅಲೆ ಹರಡುವುದನ್ನು ತಡೆಗಟ್ಟುವ ಸಂಬಂಧವಾಗಿ ಅ ಧಿಕಾರಿಗಳು ಈ ಆ್ಯಪ್ ಮೂಲಕ ಕಾರ್ಯನಿರ್ವಹಿಸಬೇಕಿದೆ. ಕೊರೊನಾ ಸೋಂಕಿತ ಪ್ರಕರಣಗಳು, ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪಕಿತರನ್ನು ಪತ್ತೆಹಚ್ಚಿ ಹಾಗೂ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಮಾಹಿತಿಯನ್ನು ಈ ಆ್ಯಪ್‌ನಲ್ಲಿ ನಮೂದಿಸಬೇಕು. ಅ ಧಿಕಾರಿಗಳ ತಂಡವು ಪ್ರತಿ ವಾರ್ಡ್‌ಗಳಲ್ಲಿ ದೃಢಪಟ್ಟ ಪ್ರಕರಣಗಳಿಗೆ ಕಾಂಟೆಕ್ಟ್ ಟ್ರೇಸಿಂಗ್‌ಗೆ ಒಬ್ಬರನ್ನು ಮತ್ತು ಕ್ವಾರಂಟೈನ್‌ಗೆ ಒಬ್ಬರನ್ನು ನಿಯೋಜಿಸಿದ್ದು, ಕಾರ್ಯಪ್ರವೃತ್ತರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆಯ ಡಾ| ಸುರೇಂದ್ರ ಬಾಬು ಮಾತನಾಡಿ, ಪಾಸಿಟಿವ್ ಪ್ರಕರಗಳು ವರದಿಯಾದರೆ ಅಂಥ ವ್ಯಕ್ತಿಯ ಪ್ರಯಾಣ ಸಂಪರ್ಕದ ಪ್ರಯಾಣ ಹಿನ್ನೆಲೆ ಪತ್ತೆ ಹಚ್ಚಬೇಕು. ಜಿಲ್ಲಾ ಸಂಪರ್ಕ ಪತ್ತೆ ತಂಡಗಳೊಂದಿಗೆ ಸಮನ್ವಯತೆ ಸಾ ಧಿಸಬೇಕು.
ಪತ್ತೆ ಹಚ್ಚಲು ಮಾಹಿತಿ ತಂತ್ರಜ್ಞಾನ ಪರಿಣಾಮಕಾರಿ ಬಳಸಬೇಕು ಎಂದರು. ಸಂಪರ್ಕಿತರನ್ನು 24 ಗಂಟೆಯೊಳಗೆ ಗುರುತಿಸಿ ಮನೆಯಲ್ಲಿ ಸಂಪರ್ಕ ತಂಡಕ್ಕೆ ಕಳುಹಿಸಬೇಕು, ಅಗತ್ಯಾನುಸಾರ ಇತರೆ ಇಲಾಖೆಗಳ ಅ ಧಿಕಾರಿ, ಸಿಬ್ಬಂದಿ, ಶಿಕ್ಷಕರನ್ನು ಸಂಪರ್ಕ ಪತ್ತೆ ಹಚ್ಚಬೇಕು, ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿ, ನಿರ್ದೇಶನ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಅಧಿ ಕಾರಿಗಳು ಸಿಬ್ಬಂದಿ ಕರ್ತವ್ಯ ಲೋಪವೆಸಗಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಆರೋಗ್ಯಾ ಧಿಕಾರಿ ಡಾ| ರಾಮಕೃಷ್ಣ, ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಸೇರಿ ಇತರರಿದ್ದರು.