Advertisement

ಶಾಸಕರ ಸಾಧನೆಗೆ ಶೀಘ್ರ ವೆಬ್‌ಸೈಟ್‌: ಮೊಯ್ಲಿ

06:25 AM Jan 08, 2018 | Team Udayavani |

ಕಲಬುರಗಿ: 2025ರ ವೇಳೆಗೆ ನವ ಕರ್ನಾಟಕದ ನಿರ್ಮಾಣ ಹಾಗೂ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಶೀಘ್ರವೇ ಕಾಂಗ್ರೆಸ್‌ ಶಾಸಕರು ಇರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿನ ಸಮಗ್ರ ಅಭಿವೃದ್ಧಿ ಹಾಗೂ ಬಳಕೆ ಮಾಡಿರುವ ಅನುದಾನದ ವಿವರ ಗಳನ್ನು ವೆಬ್‌ಸೈಟ್‌ ಮೂಲಕ ಪ್ರಕಟಿಸಲಾಗುವುದು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎಲ್ಲ ವರ್ಗಗಳ ಹಿತಕ್ಕಾಗಿ ಕಾಂಗ್ರೆಸ್‌ ಶ್ರಮಿಸುತ್ತಿದೆ. ಅದರ ಪ್ರತಿಫಲ ಈಗಾಗಲೇ ಜನರು ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಖರತೆಯಿಂದ ಮತ್ತು ಕಾರ್ಯ ಅನುಷ್ಠಾನ
ಸಮರ್ಪಕವಾಗಿ ಮಾಡುವ ಹಿನ್ನೆಲೆಯಲ್ಲಿ ಐದು ಅಂಶಗಳ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಇದರಲ್ಲಿ ರೈತರು, ಉದ್ಯಮಿಗಳು, ಕೃಷಿ ಕೂಲಿ ಕಾರ್ಮಿಕರು, ಮಹಿಳೆಯರ ಮತ್ತು ವಿದ್ಯಾರ್ಥಿಗಳ, ಮಕ್ಕಳ ಸಮಗ್ರ
ವಿಕಾಸದ ಮುನ್ನೋಟವನ್ನು ಇಟ್ಟುಕೊಳ್ಳಲಾಗಿದೆ. ಪ್ರಣಾಳಿಕೆ ಸಮಿತಿಯಲ್ಲಿ 15 ಜನ ಇದ್ದಾರೆ. ಈಗಾಗಲೇ ರಾಜ್ಯದ
ನಾಲ್ಕು ಕಡೆ ಸಭೆ ಮಾಡಲಾಗಿದೆ. ಕಲಬುರಗಿಯ ಬಳಿಕ ಚಿತ್ರದುರ್ಗದಲ್ಲೂ ಸಭೆ ನಡೆಯಲಿದ್ದು, ಜನವರಿ ಅಂತ್ಯಕ್ಕೆ
ಸಮಿತಿ ತನ್ನ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next