Advertisement

ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆಗೆ ಶೀಘ್ರ ಪರಿಹಾರ

07:00 AM Mar 24, 2018 | Team Udayavani |

ಕುಂದಾಪುರ: ನಗರದಲ್ಲಿನ ಟ್ರಾಫಿಕ್‌ ಸಮಸ್ಯೆ, ಪಾರ್ಕಿಂಗ್‌ ಸಮಸ್ಯೆ ಬಗ್ಗೆ ಶುಕ್ರವಾರ ನಡೆದ ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಯಿತು. 

Advertisement

ಅಧ್ಯಕ್ಷೆ ವಸಂತಿ ಮೋಹನ ಸಾರಂಗ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಪಾರ್ಕಿಂಗ್‌ ಸಮಸ್ಯೆ ನಿಭಾಯಿಸಲು ಶಾಸಿŒ ಸರ್ಕಲ್‌ನಿಂದ ಶೆಣೈ ಸರ್ಕಲ್‌ ವರೆಗೆ ರಸ್ತೆಯ ಎರಡೂ ಕಡೆ ಇಂಟರ್‌ಲಾಕ್‌ ಅಳವಡಿಸಲಾಗುವುದು. ಆಗ ವಾಹನ ನಿಲ್ಲಿಸಲು ಜಾಗ ಲಭ್ಯ ವಾಗಲಿದ್ದು, ಪಾರ್ಕಿಂಗ್‌ ಸಮಸ್ಯೆ ಪರಿಹಾರವಾಗಲಿದೆ ಎಂದು ಪುರಸಭಾ ಉಪಾಧ್ಯಕ್ಷ ರಾಜೇಶ್‌ ಕಾವೇರಿ ಭರವಸೆ ನೀಡಿದರು.
 
ಸಿಬಂದಿ ಇಲ್ಲ
ಸಂಚಾರಿ ಠಾಣೆಗೆ 31 ಸಿಬಂದಿಗಳ ಮಂಜೂರಾತಿ ಇದ್ದರೂ 2 ಎಸ್‌ಐ, 4 ಎಎಸ್‌ಐ ಸೇರಿ ಒಟ್ಟು 16 ಮಂದಿ ಮಾತ್ರ ಇದ್ದಾರೆ, ಪ್ರಮುಖವಾಗಿ ಬಸೂÅರು ಸರ್ಕಲ್‌, ತಲ್ಲೂರು ಸರ್ಕಲ್‌, ಶಾಸಿŒ ಪಾರ್ಕ್‌, ಪಾರಿಜಾತ ಜಂಕ್ಷನ್‌ ಬಳಿ ಸಿಬಂದಿ ಇದ್ದಾರೆ. ಆದರೆ ಸಿಬಂದಿ ಕೊರತೆ ಇದೆ ಎಂದು ಸಂಚಾರಿ ಠಾಣೆಯ ಉಪನಿರೀಕ್ಷಕ ಲೋಲಾಕ್ಷ ಹೇಳಿದರು. ಅಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ ನಗರಕ್ಕೆ ಬರದೆ ಹೊರಗಿನಿಂದಲೇ ಸಾಗಿದಾಗ ಅರ್ಧದಷ್ಟು ಸಮಸ್ಯೆ ಪರಿಹಾರ ದೊರೆಯುತ್ತದೆ ಎಂದರು. ಆದರೆ ಎಲ್ಲೆಂದರಲ್ಲಿ ನಿಲ್ಲಿಸುವ ಖಾಸಗಿ ಬಸ್‌ಗಳಿಗೆ ಮೊದಲು ಕಡಿವಾಣ ಹಾಕುವಂತೆ ಸದಸ್ಯ ಉದಯ್‌ ಮೆಂಡನ್‌ ಹೇಳಿದರು. ಜತೆಗೆ ಶೇ.90ರಷ್ಟು ಖಾಸಗಿ ವಾಹನ ಅಸಮರ್ಪಕ ಪಾರ್ಕಿಂಗ್‌ ಮಾಡುತ್ತಾರೆಂದು ಸದಸ್ಯ ಮೋಹನದಾಸ ಶೆಣೈ ಹೇಳಿದರು.

ಕಾನೂನು ಪುಸ್ತಕ
95 ಸಾವಿರ ರೂ. ಕಾನೂನು ಪುಸ್ತಕ ಖರೀದಿ ಬಗ್ಗೆ ಘಟನೋತ್ತರ ಮಂಜೂರಾತಿ ಕೇಳಿದಾಗ ಅನುದಾನಕ್ಕೆ ಹಣವಿಲ್ಲ ಎನ್ನುತ್ತೀರಿ, ದುಬಾರಿ ಪುಸ್ತಕವೇಕೆ ಎಂದು ಸದಸ್ಯೆ ಪುಷ್ಪಾ ಶೆಟ್ಟಿ ಆಕ್ಷೇಪಿಸಿದರು. ಆದರೆ ಇದು ಆಡಳಿತಾತ್ಮಕ ದೃಷ್ಟಿ ಯಿಂದ ಖರೀದಿಸಿದ್ದು ಎಂದು ಸ್ಪಷ್ಟೀಕರಿಸಲಾಯಿತು. 
 
ಒಳಚರಂಡಿ ಸಮಸ್ಯೆ
7.5 ಕೋ.ರೂ. ಮಂಜೂರಾಗಿ ದ್ದರೂ ಯುಜಿಡಿ ಕಾಮಗಾರಿ ಅಸಮರ್ಪಕವಾಗಿದೆ. ಕಳೆದ 4 ತಿಂಗಳಿನಿಂದ ಕಾಮಗಾರಿಗೆ ಸಂಬಂಧಿಸಿದವರು ಸಭೆಗೆ ಬಂದಿಲ್ಲ. ಭೂಸ್ವಾಧೀನ ಆಗಿಲ್ಲ. ಅವಧಿ ಮುಗಿದರೂ ಕಾಮಗಾರಿ ಆಗಿಲ್ಲ ಎಂದು ಸದಸ್ಯರು ಹೇಳಿ
ದರು. ಪೂರಕವಾಗಿ ಅನುದಾನ ಇಲ್ಲದೇ ಕಾಮಗಾರಿಗೆ ಟೆಂಡರ್‌, ಶಿಲಾನ್ಯಾಸದ ಬಗ್ಗೆ ಸದಸ್ಯ ಚಂದ್ರಶೇಖರ ಖಾರ್ವಿ
ಟೀಕಿಸಿದರು. ಆದರೆ ಇದಕ್ಕೆ ಉದಯ ಮೆಂಡನ್‌ ಆಕ್ಷೇಪಿಸಿ ದರು. ಅನುದಾನ ಇಲ್ಲದಿದ್ದರೆ ಇಂದಿರಾ ಕ್ಯಾಂಟೀನ್‌ ನಿಲ್ಲಿಸಿ  ಎಂದು ಸದಸ್ಯರೊಬ್ಬರು ಹೇಳಿದ್ದು ಕೂಡ ಮಾತಿನ ಚಕಮಕಿಗೆ ಕಾರಣವಾಯಿತು. ಸ್ಥಾಯೀ ಸಮಿತಿ ಅಧ್ಯಕ್ಷ ವಿಟuಲ ಕೆ. ಕುಂದರ್‌, ಕಂದಾಯ ಅಧಿಕಾರಿ ಅಂಜನಿ ಗೌಡ ಉಪಸ್ಥಿತರಿದ್ದರು.

ಸಿಬಂದಿ ನೇಮಿಸಿ 
ಶಾಲಾ ಕಾಲೇಜು ಸಮಯದಲ್ಲಿ ಟ್ರಾಫಿಕ್‌ ಹೆಚ್ಚಿರುತ್ತದೆ. ಆಗ ಸಿಬಂದಿ ಹಾಕಿ ನಿಯಂತ್ರಿಸಬೇಕು. ವೇಗದ ಚಾಲನೆ ನಿಲ್ಲಿಸಬೇಕು. ಹಳೆ ಬಸ್‌ ನಿಲ್ದಾಣದ ನಡುವೆ ಇರುವ ಮೂರು ತಂಗುದಾಣಗಳಲ್ಲಿ ಎರಡನ್ನು ತೆಗೆಯಬೇಕು. ರಸ್ತೆ ಬದಿ ಗೂಡಂಗಡಿಯಿಂದ ಸಮಸ್ಯೆಯಾಗುತ್ತಿದೆ ಎಂದು ಸದಸ್ಯ ಚಂದ್ರಶೇಖರ ಖಾರ್ವಿ ಹೇಳಿದರು. ಆದರೆ ನಿಲ್ದಾಣ ತೆರವಿಗೆ ಜನರ ವಿರೋಧವಿದೆ ಎಂದು ಮೋಹನದಾಸ ಶೆಣೈ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next