Advertisement

ಉದ್ದಿಮೆಗಳ ಖಾತಾ ಬದಲಾವಣೆ ಸಮಸ್ಯೆಗೆ ತ್ವರಿತ ಪರಿಹಾರ: ಅತಿಕ್‌

10:45 PM Jan 30, 2023 | Team Udayavani |

ಬೆಂಗಳೂರು: ಸಣ್ಣ ಉದ್ದಿಮೆಗಳಿಗೆ ಅಗತ್ಯವಾಗಿರುವ ಖಾತಾ ಬದಲಾವಣೆ, ಪರಿವರ್ತನೆಯ ಸಮಸ್ಯೆ ವ್ಯಾಪಕವಾಗಿದ್ದು ಇದನ್ನು ಪರಿಹರಿಸಲು ಖಾತಾ ಅದಾಲತ್‌ಗಳನ್ನು ನಡೆಸಲು ಪಂಚಾಯತ್‌ರಾಜ್‌ ಇಲಾಖೆ ಸಿದ್ಧವಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಭರವಸೆ ನೀಡಿದ್ದಾರೆ.

Advertisement

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಆಯೋಜಿಸಿದ್ದ ಸಂವಾದ ಸಭೆಯಲ್ಲಿ ಪಾಲ್ಗೊಂಡ ಅವರಲ್ಲಿ ಹಲವು ಉದ್ದಿಮೆದಾರರು ಖಾತಾ ವಿಷಯದ ಸಮಸ್ಯೆಯ ಬಗ್ಗೆ ಅಳಲು ತೋಡಿಕೊಂಡ ಸಂದರ್ಭದಲ್ಲಿ ಈ ಭರವಸೆ ನೀಡಿದರು.

ಖಾತಾ ಬದಲಾವಣೆಯನ್ನು ಕಾಲಮಿತಿಯಲ್ಲಿ ಮಾಡಬೇಕು ಎಂಬ ನಿಯಮವಿದೆ. ಅದರಂತೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಕಾರ್ಯನಿರ್ವಹಿಸಬೇಕು. ಅದಾಗ್ಯೂ ಖಾತಾ ಬದಲಾವಣೆ ಸಮಸ್ಯೆಗಳಿದ್ದಲ್ಲಿ ಅದರ ತ್ವರಿತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ಇಲಾಖೆ ಪ್ರಯತ್ನ ನಡೆಸಲಿದೆ ಎಂದು ಹೇಳಿದರು.

ಉದ್ದಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಪಂಚಾಯತ್‌ನ ಚುನಾಯಿತ ಪ್ರತಿನಿಧಿಗಳಿಗೆ, ಪಂಚಾಯತ್‌ ಅಧಿಕಾರಿಗಳಿಗೆ ಕೆಲವು ಅಧಿಕಾರಗಳಿವೆ. ಆದರೆ ಗ್ರಾಮೀಣ ಭಾಗದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವ ಉದ್ದೇಶದಿಂದ ಎಲ್ಲರೂ ಪರಸ್ಪರ ಸಹಕಾರ ನೀಡಬೇಕು. ಇದಕ್ಕಾಗಿ ವ್ಯವಸ್ಥೆಯೊಂದನ್ನು ರೂಪಿಸುವ ಚಿಂತನೆ ಇದೆ ಎಂದು ಹೇಳಿದರು.
ತೆರಿಗೆ ನಿಗದಿ ಮತ್ತು ತೆರಿಗೆ ಕಟ್ಟುವ ಬಗೆಗಿನ ಅನುಮಾನಗಳನ್ನು ಅತಿಕ್‌ ಗಮನಕ್ಕೆ ತಂದಾಗ, ತೆರಿಗೆಯ ಮಾಹಿತಿಯನ್ನು ಒಳಗೊಂಡ ಪ್ರಶ್ನೋತ್ತರ ಮಾದರಿಯ ಸಣ್ಣ ಸಣ್ಣ ವಿಡಿಯೋ ತುಣುಕುಗಳನ್ನು ಮಾಡಿ ಎಲ್ಲ ಪಿಡಿಒಗಳಿಗೆ ಕಳುಹಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಸಿಯಾದ ಅಧ್ಯಕ್ಷ ಕೆ. ಎನ್‌. ನರಸಿಂಹಮೂರ್ತಿ, ಗೌರವ ಕಾರ್ಯದರ್ಶಿ ಪ್ರವೀಣ್‌ ಬಿ., ಉಪಾಧ್ಯಕ್ಷ ಶಶಿಧರ ಶೆಟ್ಟಿ, ಪಂಚಾಯತ್‌ ತೆರಿಗೆ ನಿರ್ದೇಶಕ ರುದ್ರಪ್ಪ ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ಉಪ ನಿರ್ದೇಶಕ ಜಗದೀಶ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next